ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಹೊಗಳಿದ ಶಾಸಕಿ ರೂಪ

ಕೆಜಿಎಫ್:ಜು:೨೧: ನಗರದ ಮುನಿಸಿಪಾಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳ ಅರಿವು ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ರೂಪಕಲಾಶಶಿಧರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಕುರಿತು ಇಂದ್ರ ಚಂದ್ರಗಳಿಗೆ ಹೊಲಿಸಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ನೀಡುವ ನೂರಾರು ನಿಭಂದನೆಗಳನ್ನು ವಿಧಿಸಿ ಶೂರ್‍ಯುಟಿ ಪಡೆದು ಸಾಲವನ್ನು ನೀಡುವುದು ಅದರಲ್ಲೂ ಮಹಿಳೆಯರಿಗೆ ಸಾಲ ನೀಡಲು ಹಿಂದೆ ಮುಂದೆ ನೋಡುತ್ತದೆ ಆದರೆ ನಮ್ಮ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಹಿಳೆಯರು ಬಡ್ಡಿ ಚಕ್ರ ಬಡ್ಡಿ ಎಂಬ ಬೂತದಿಂದ ಬಿಡುಗಡೆ ಹೊಂದಿ ಸ್ವಾಲಂಭನೆ ಬದುಕು ನಡೆಸಬೇಕು ಎಂಬ ದೃಷ್ಠಿಯಿಂದ ಮಹಿಳೆಯರಿಂದ ಒಂದು ದಾಖಲೆಗಳನ್ನು ಪಡೆಯದೆ ಬಡ್ಡಿ ರಹಿತ ಸಾಲವನ್ನು ಸಾವಿರಾರು ಮಹಿಳೆಯರಿಗೆ ಸಾವಿರಾರು ಕೋಟಿಯನ್ನು ನೀಡಿದ್ದಾರೆ ಎಂದರು.
ಮಹಿಳೆಯರ ಸ್ರೀ ಶಕ್ತಿ ಸಂಘಗಳಿಗೆ ನಬರ್ಡ್ ಇ ಶಕ್ತಿ ಎಂದು ನಾಮಂಕಿತವನ್ನು ನೀಡಿದ್ದು ಇನ್ನು ಮುಂದೆ ನೀವೆ ಕಡತಗಳನ್ನು ಆನ್‌ಲೈನ್ ಮೂಲಕ ಅಪಡೇಟ್ ಮಾಡದಿರೆ ನಿಮ್ಮ ದಾಖಲೆಗಳು ನಬರ್ಡ್‌ಗೆ ಸಲ್ಲಿಕೆಯಾಗುತ್ತದೆ ಮತ್ತು ನಿಯಮಿತವಾಗಿ ಸಂಘದ ಚಟುವಟಿಕೆಗಳನ್ನು ನಡೆಸಿ ಯಶಸ್ವಿಯಗಿ ಸಂಘವನ್ನು ಮುನ್ನೆಡೆಸಿ ಮುಂದಿನ ದಿನಗಳಲ್ಲಿ ೧ ಲಕ್ಷ ಸಾಲವನ್ನು ಪಡೆಯಿರಿ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ ನಮ್ಮ ತಾಯಂದಿರುವ ಎಂದಿಗೂ ಮೋಸ ಮಾಡುವ ಗುಣವನ್ನು ಹೊಂದಿರುವುದಿಲ್ಲ ಆದರೆ ಕೆಲವರು ಮಾತ್ರ ಯಾರೋ ಹೇಳುವ ಮಾತುಗಳನ್ನು ಕೇಳುವುದರಿಂದ ಓಮ್ಮೆ ತೆಗೆದುಕೊಂಡ ನಂತರ ಮರು ಸಾಲ ಪಡೆಯಲು ಸಾಧ್ಯವಾಗುವುದಿಲ್ಲ ಎಂಬುದನ್ನು ನೆನೆಪಿನಲ್ಲಿ ಇಟ್ಟುಕೊಂಡು ಸಂಘವನ್ನು ಮುನ್ನೆಡೆಸಿಕೊಂಡು ಹೋಗಿ ನಿಮಗೆ ಮುಂದಿನ ದಿನಗಳಲ್ಲಿ ೧ ಲಕ್ಷ ಸಾಲ ಸೌಲಭ್ಯವನ್ನು ನೀಡಲಾಗುವುದು ಡಿಸಿಸಿ ಬ್ಯಾಂಕ್ ನೀಡುವ ಸಾಲವನ್ನು ಪಡೆದು ಸಣ್ಣ ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಿ ನಿನ್ನ ಕಾಲುಗಳ ಮೇಲೆ ನಿಲ್ಲಬೇಕು ಎಂಬ ಮನೋಭಿಲಾಷೆಯನ್ನು ಇಟ್ಟುಕೊಂಡು ಇಂತಹ ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತಿದ್ದು ಮಹಿಳೆಯರು ಸರ್ಮಪಕವಾಗಿ ಸದ್ಬಳಕೆ ಮಾಡಿಕೊಂಡರೆ ನಮಗೆ ಸಾರ್ಥಕತೆಯನ್ನು ಕಾಣಲಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೇತಮಂಗಲ,ಕ್ಯಾಸಂಬಳ್ಳಿ,ಸುಂದ್ರಪಾಳ್ಯ, ಕೆಂಪಾಪುರ ಸೋಸೈಟಿಗಳ ವ್ಯಾಪ್ತಿಯ ನೂರಾರು ಮಹಿಳೆಯರು ಸಭೆಗೆ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದಾಕೃಷ್ಣರೆಡ್ಡಿ,ಮದೋಲೈಮುತ್ತು, ಬೇತಮಂಗಲ ವ್ಯವಸಾಯ ಸೇವ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನ ,ಮುನಿಸ್ವಾಮಿ, ಬಾಲಕೃಷ್ಣ ಹಾಗೂ ಇತರರು ಹಾಜರಿದ್ದರು.