ಡಿಸಿಸಿ ಬ್ಯಾಂಕಿನ ಜನಪರ ಕಾಳಜಿ ದೇಶಕ್ಕೆ ಮಾದರಿಯಾಗಿದೆ:ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ

ಬೀದರ:ಜು.22:ಮನುಷ್ಯ ಸಂಘಜೀವಿಯಾಗಿದ್ದು ಪರಸ್ಪರ ಅವಲಂಬನೆ ಸ್ವಾಭಾವಿಕವಾಗಿದೆ. ಅವರಿಗೆ ಉತ್ತಮ ಸೇವೆ ನೀಡುವಲ್ಲಿ ಸಹಕಾರಿ ಆಂದೋಲನ ಅತ್ಯಂತ ಆದರ್ಶ ಮಾದರಿಯಾಗಿದೆ. ಖಾಸಗೀ ವ್ಯವಸ್ಥೆಯು ಲಾಭಕ್ಕಾಗಿ ಸೇವೆ ನೀಡಿದರೆ ಸಹಕಾರಿ ಸಂಘಗಳು ಕಮ್ಮಿ ಲಾಭದಲ್ಲಿ ಸದಸ್ಯರ ಆವಶ್ಯಕತೆಗಳನ್ನು ಪೂರೈಸುತ್ತವೆ. ಬೀದರ ಜಿಲ್ಲೆಯಲ್ಲಿ ಶೇಕಡ 80%ರಷ್ಟು ರಸಗೊಬ್ಬರವು ಸಹಕಾರಿ ಸಂಘಗಳ ಮೂಲಕವೇ ವಿತರಣೆಯಾಗುತ್ತಿದ್ದು ರೈತರಿಗೆ ತೊಂದರೆಯಾಗದಂತೆ ಸೇವೆ ನೀಡುತ್ತಿರುವ ಇಲ್ಲಿನ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಮತ್ತು ಅದರ ನೇತೃತ್ವ ವಹಿಸಿರುವ ಡಿಸಿಸಿ ಬ್ಯಾಂಕಿನ ಜನಪರ ಕಾಳಜಿ ದೇಶಕ್ಕೆ ಮಾದರಿಯಾಗಿದೆ. ಬೀದರ ಡಿಸಿಸಿ ಬ್ಯಾಂಕು ಮತ್ತು ಪ್ಯಾಕ್ಸಗಳ ನಡುವಿನ ಸೌಹಾರ್ದಯುತ ಸಂಬಂಧ ಸಹಕಾರಿ ವ್ಯವಸ್ಥೆಯ ಸುಧೃಢ ಬೆಳವಣಿಗೆಗೆ ಕಾರಣವಾಗಿದೆ. ಸಹಕಾರಿ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಕಮ್ಮಿ ದgದಲ್ಲಿ ವಿಶ್ವಾಸಾರ್ಹವಾದ ಸೇವೆ ನೀಡುವಲ್ಲಿ ಮುಂದೆ ಬರಬೇಕು. ಅದಕ್ಕಾಗಿ ಯೋಜನೆಗಳನ್ನು ರೂಪಿಸಬೇಕು. ತಮ್ಮ ಸಂಘಗಳ ಅಭಿವೃದ್ದಿಗಾಗಿ ದೂರದೃಷ್ಟಿಯನ್ನು ಹೊಂದಿರಬೇಕು. ಜನರಿಗೆ ತಮ್ಮ ಕೈಗೆಟುಕುವಷ್ಟು ಹತ್ತಿರದಲ್ಲೇ ಸೇವೆಗಳು ದೊರಕಿದಾಗ ಇದು ತಮ್ಮ ಸಂಸ್ಥೇಯೆಂಬ ಭಾವನೆ ಮೂಡುತ್ತದೆ. ಸಹಕಾರದ ಬಲ ವೃದ್ದಿಯಾಗುತ್ತದೆ. ಜನರಿಗೆ ಹಿತವಾಗುತ್ತದೆ. ಸಂಸ್ಥೆಯಲ್ಲಿ ಮಾದರಿ ಸೇವೆಗಳನ್ನು ನೀಡುವ ಯೋಜನೆ ರೂಪಿಸಲು ತರಬೇತಿಗಳಿಗೆ ಹಾಜರಾಗಬೇಕು. ತರಬೇತಿಗಳಲ್ಲಿ ಅನುಭವ ಹಂಚಿಕೊಳ್ಳಬೇಕು ಉತ್ತಮವಾದ ಸಂಗತಿಗಳನ್ನು ತಮ್ಮ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾನ್ಯ ಬೀದರ ಜಿಲ್ಲಾಧಿಕಾರಿಗಳಾದ ಗೋವಿಂದ ರೆಡ್ಡಿ ಯವರು ನುಡಿದರು.

ಡಾ|| ಗುರುಪಾದಪ್ಪಾ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಬಳ್ಳಾರಿ, ಧಾರವಾಡ ಮತ್ತು ಬಾಗಲಕೋಟೆ ಶಿರಸಿ ಜಿಲ್ಲೆಗಳ ಪ್ಯಾಕ್ಸಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ನಬಾರ್ಡ ವತಿಯಿಂದ ನಡೆದ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂಘಗಳ ಅಭಿವೃದ್ದಿಗೆ ಉತ್ತಮ ನಾಯಕತ್ವ ಬಹಳ ಮುಖ್ಯವಾಗಿದೆ. ಬೀದರ್ ಡಿ.ಸಿ.ಸಿ ಬ್ಯಾಂಕ್ ಉತ್ತಮ ನಾಯಕತ್ತವ ಹೊಂದಿದ್ದು ಫಸಲ ಬೀಮಾ ಮತ್ತು ಸ್ವ ಸಹಾಯ ಗುಂಪುಗಳ ಕಾರ್ಯಕ್ರಮ ಜಾರಿಯಲ್ಲಿ ದೇಶಕ್ಕೇ ಮಾದರಿಯಾಗಿದೆ ಎಂದು ಹೇಳಿದರು.

ಸಮಾರಂಬದ ಅತಿಥಿಗಳಾಗಿದ್ದ ಉಪ ಪ್ರಧಾನ ವ್ಯವಸ್ಥಾಪಕ ಚನಬಸಯ್ಯಾ ಸ್ವಾಮಿಯವರು ಬಹುಸೇವಾ ಕೇಂದ್ರವಾಗಿ ಪ್ಯಾಕ್ಸಗಳನ್ನು ಮಾರ್ಪಡಿಸಿದಾಗ ರೈತರ ಸೇವೆಗಳಿಗೆ ಮಹತ್ವ ನೀಡಬೇಕು. ಹೆಚ್ಚು ಸದಸ್ಯರನ್ನು ಮಾಡಿ ಶೇರು ಬಂಡವಾಳ ಹೆಚ್ಚಿಸಿಕೊಳ್ಳಬೇಕು. ಸದಸ್ಯರಿಗೆ ಸಾಲ ನೀಡಿ, ಸೇವೆ ಒದಗಿಸಿ, ಸೇವೆ ಮಾಡುವಂತಹ ಹೊಸ ಯೋಜನೆ ರೂಪಿಸಿ ರೈತರ ಮನೆ ಬಾಗಿಲಿಗೆ ಸೇವೆ ತಲುಪಿಸಿ ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ಮೊಹಮ್ಮದ ಮೊಮಿ£,À ಡಿಸಿಸಿ ಬ್ಯಾಂಕಿನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮಹಾಜನ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿಯವರು ಉಪಸ್ಥಿತರಿದ್ದರು.

ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ಸ್ವಾಗತಿಸಿದರೆ, ಎಸ ಜಿ ಪಾಟೀಲ ವಂದಿಸಿದರು ಅನಿಲ ಪಿ ಕಾರ್ಯಕ್ರಮ ನಿರ್ವಹಿಸಿದರು. ಅಪ್ಪಣ್ಣ ಸಹಕರಿಸಿದರು.