ಡಿಸಿಸಿ‌ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿಗೆ ಕರೊನಾ ಸೋಂಕು

ಬೀದರ:ಮಾ.14: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕರೊನಾ
ಇಲ್ಲಿಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್( DCC Bank) ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರಿಗೆ ಕರೊನಾ ಪಾಸಿಟಿವ್
ನಿನ್ನೆ ಇಲ್ಲಿನ ಬ್ರಿಮ್ಸ್ ನಲ್ಲಿ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು. ಅವರ ವರದಿ ಪಾಸಿಟಿವ್ ಬಂದಿದೆ ಎಂದು ಬ್ರಿಮ್ಸ್ ಮೂಲಗಳು ಖಚಿತಪಡಿಸಿವೆ. ಉಮಾಕಾಂತ ನಾಗಮಾರಪಳ್ಳಿ ಅವರ ಪತ್ನಿಗೂ ಸೋಂಕು ತಗುಲಿದೆ.
ಡಿಸಿಸಿ ಬ್ಯಾಂಕ್ ಕೆಲಸ ಹಾಗೂ ನಾನಾ ಸಭೆ, ಸಮಾರಂಭ ನಿಮಿತ್ತ ವಿವಿಧೆಡೆ ಸಂಚರಿಸಿದರು. ಬೆಂಗಳೂರಿಗೂ ಹೋಗಿ ಬಂದಿದ್ದರು. ಈ ವೇಳೆ ಸೋಂಕಿತರ ಸಂಪರ್ಕದಿಂದ ಇವರಿಗೆ ವೈರಸ್ ತಗುಲಿದೆ.
ಜಿಲ್ಲೆಯಲ್ಲಿ ಎರಡು ವಾರಗಳಿಂದ ಕರೊನಾತಂಕ ಹೆಚ್ಚಾಗಿದೆ. ವಾರದಲ್ಲಿ ನೂರಕ್ಕೂ ಹೆಚ್ಚು ಕೇಸ್ ಬಂದಿವೆ. ಶುಕ್ರವಾರ ಹೊಸದಾಗಿ 15 ಜನರಿಗೆ ಪಾಸಿಟಿವ್ ಬಂದಿದೆ. ಸಂಸದ ಭಗವಂತ ಖೂಬಾ ಅವರ ಪುತ್ರಿಗೂ ಇತ್ತೀಚೆಗೆ ಕರೊನಾ ಸೋಂಕು ದೃಢಪಟ್ಟಿದೆ.