ಡಿಸಿರಿಗೆ ಜಿ.ಪಂ.ಪ್ರಭಾರಿ

ರಾಯಚೂರು.ಆ.೦೬- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪ್ರಭಾರಿಯನ್ನು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರಿಗೆ ವಹಿಸಿ ಆದೇಶಿಸಲಾಗಿದೆ.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿರುವ ನೂರ್ ಜಹಾರ್ ಖಾನೂಮ್ ಅವರಿಗೆ ಪ್ರಭಾರಿ ನೀಡಲಾಗಿತ್ತು. ಈ ಹಿಂದೆ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಕೆಎಟಿಯಲ್ಲಿ ತಮ್ಮ ವರ್ಗಾವಣೆ ವಿರುದ್ಧ ತಕರಾರು ಅರ್ಜಿ ಸಲ್ಲಿಸಿದ್ದರು. ಕೆಎಟಿಯೂ ಖಾನಂ ಅವರ ಉಪ ಕಾರ್ಯದರ್ಶಿ ಹುದ್ದೆ ನೇಮಕ ಬಗ್ಗೆ ಹೇಳಿದ ಆದೇಶದಿಂದಾಗಿ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಪ್ರಭಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.