ಡಿಸಿಯಿಂದಲೇ ಮಾರ್ಗಸೂಚಿ ಉಲ್ಲಂಘನೆ

ಕೋಲಾರ,ಏ.೨೭: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಸಾವಿನ ಪ್ರಮಾಣವೂ ಭಯ ಮೂಡಿಸಿದೆ ಆದರೆ ಇದರ ತಡೆಗೆ ನೇತೃತ್ವ ವಹಿಸಬೇಕಾದ ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ ಅವರೇ ಸೋಮವಾರ ಮುಳಬಾಗಿಲಿನ ತಾಲ್ಲೂಕು ಕಚೇರಿಯಲ್ಲಿ ಸಾಮಾಜಿಕ ಅಂತರ ಪಾಲಿಸದೇ ಸಭೆ ನಡೆಸಿದ್ದು, ತೀವ್ರ ಟೀಕೆಗೆ ಒಳಗಾಗಿದೆ.
ಮುಳಬಾಗಿಲು ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕಿನ ಬೂತ್ ಮಟ್ಟದ ಅಧಿಕಾರಿಗಳಿಗೆ ಕೋವಿಡ್ ಕಾಂಟ್ಯಾಕ್ಟ್ ಟ್ರೇಸಿಂಗ್ ಆ?ಯಫ್ ಕುರಿತು ಅರಿವು ಮೂಡಿಸಲು ಸಭೆ ನಡೆಸಿದ ಅಪರ ಡಿಸಿ ಡಾ.ಸ್ನೇಹಾ ಅವರು ಸಭೆಯಲ್ಲಿ ಸಾಮಾಜಿಕ ಅಂತರ ಗಾಳಿಗೆ ತೂರಿದರು.
ಈ ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಬಿಎಲ್‌ಒಗಳಾಗಿಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಪಾಲ್ಗೊಂಡಿದ್ದು, ಸಾಮಾಜಿಕ ಅಂತರವಿಲ್ಲದೇ ಸಭೆ ನಡೆಸಿದ್ದು, ಸೋಂಕು ತೀವ್ರಗೊಳ್ಳುವ ಆತಂಕಕ್ಕೆ ಪುಷ್ಟಿ ನೀಡುವಂತಿತ್ತು.