
ದಾವಣಗೆರೆ, ಮೇ.೫; ದಾವಣಗೆರೆಯ ಡಿಸಿಎಂ ಟೌನ್‌ಶಿಪ್‌ನ ನಾಗರಿಕ ಸಂಘದ ಸರ್ವ ಸದಸ್ಯರ ಮಹಾಸಭೆ ಇತ್ತೀಚಿಗೆ ಡಿಸಿಎಂನ ಶ್ರೀ ಚೌಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದಿದ್ದು ಸಮಿತಿಯ ಅಧ್ಯಕ್ಷರಾಗಿ ಕೆ.ಹಾಲಪ್ಪ ಸರ್ವಾನುಮತದಿಂದ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ ಎಂದು ಸಮಿತಿಯ ಹಿರಿಯರಾದ ಅಕ್ಕಿ ವೀರಭದ್ರಪ್ಪನವರು ತಿಳಿಸಿದ್ದಾರೆ.ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಶಿವನಪ್ಪ, ಖಜಾಂಚಿತಯಾಇ ಡಿ.ಹೆಚ್.ಚನ್ನಬಸಪ್ಪ, ಗೌರವ ಅಧ್ಯಕ್ಷರಾಗಿ ಮೂಡಲಗಿರಿಯಪ್ಪ, ಉಪಾಧ್ಯಕ್ಷರಾಗಿ ಶ್ರೀಮತಿ ಶಾರದಮ್ಮ ಶಿವವನಪ್ಪ, ಮಂಜುನಾಥ ರೆಡ್ಡಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಎಸ್. ಶಾರದಮ್ಮನವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ ನಿರಂಜನ್ ಸ್ವಾಗತಿಸಿದರು, ಮಂಜುನಾಥ ರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾರ್ಷಿಕ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು. ದ್ಯಾಮನಗೌಡ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ಬಸವರಾಜ ಅಂಗಡಿ ವಂದಿಸಿದರು