ಡಿವೈಎಸ್‌ಪಿ ವೀರೇಂದ್ರ ನಾಯ್ಕ್‌ಗೆ ಸಿಎಂ ಪದಕ

ಪೊಲೀಸ್ ಇಲಾಖೆಯಲ್ಲಿ ಅತ್ಯತ್ತಮ ಸೇವೆ ಪರಿಗಣಿಸಿ ನೀಡಲಾಗುವ ೨೦೧೭-೧೮ರ ಮುಖ್ಯಮಂತ್ರಿ ಪದಕಕ್ಕೆ ದಾವಣಗೆರೆ ಜಿಲ್ಲೆಯವರಾದ ಡಿವೈಎಸ್‌ಪಿ ವೀರೇಂದ್ರ ನಾಯ್ಕ್. ಎನ್ ಆಯ್ಕೆ ಆಗಿದ್ದಾರೆ. ಬೆಳಗಾವಿಯಲ್ಲಿ ಡಿವೈಎಸ್‌ಪಿ ಹಾಗೂ ಪಿಟಿಎಸ್ ಆಗಿ ಸೇವೆ ಸಲ್ಲಿಸುತ್ತಿರುವ ವೀರೇಂದ್ರ ನಾಯ್ಕ್ ಇವರಿಗೆ ೨೦೧೮ನೇ ಸಾಲಿನ ಮುಖ್ಯಂತ್ರಿ ಪದಕಕ್ಕೆ ಭಾಜನರಾಗಿದ್ದು, ಬೆಂಗಳೂರಿನ ವಿಧಾನಸೌಧದ ಬಳಿಯ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನೆಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಶಸ್ತಿಯನ್ನು ನೀಡಲಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.