ಡಿವೈಎಸ್ಪಿ ಶಂಕರಗೌಡ ಪಾಟೀಲರಿಗೆ ಬೀದಿಬದಿ ವ್ಯಾಪಾರಿಗಳ ಸಂಘದಿಂದ ಸತ್ಕಾರ

ಕಲಬುರಗಿ,ಜು.31- ಬಡ ಕಕ್ಷಿದಾರರು ನ್ಯಾಯವನ್ನು ಅರಸಿಕೊಂಡು ಕೋರ್ಟಿಗೆ ಬರುತ್ತಾರೆ, ಬುತ್ತಿಕಟ್ಟಿಕೊಂಡು ಬರುವ ಬಡ ಕಕ್ಷಿದಾರರಿಗೆ ಒಂದಿಷ್ಟು ಆರ್ಥಿಕ ನೆರವು ನೀಡುವುದು ಮತ್ತು ಬಡವರ ಅಂತಿಮ ಸಂಸ್ಕಾರಕ್ಕೆ ಸಹಾಯ ಮಾಡುವುದು ರೂಡಿಸಿಕೊಂಡಿರುವ ಪೊಲೀಸ ಅಧಿಕಾರಿ ಶಂಕರಗೌಡ ಪಾಟೀಲರ ಸಮಾಜಿಕ ಕಾರ್ಯಗಳನ್ನು ಮೆಚ್ಚಿ ಸನ್ಮಾನ ಮಾಡಿ ಗೌರವಿಸುತ್ತಿರುವುದು ಶ್ಲಾಘನೀಯ ಅವರ ಒಳ್ಳೆಯ ಕೆಲಸಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಹಿರಿಯ ನ್ಯಾಯವಾದಿ ಗುರುರಾಜ ತಿಳಗೊಳ ಹೇಳಿದರು.
ಮಹಾನಗರದ ಸಿಟಿ ಬಸ್ ಸ್ಟ್ಯಾಂಟ್ ಸುಪರ ಮಾರುಕಟ್ಟೆ ಅಖಿಲ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾಜ ಸೇವಕರ ಸತ್ಕಾರ ಕಾರ್ಯಕ್ರಮದಲ್ಲಿ ಸಿಐಡಿ ವಿಭಾಗದ ಡಿವೈಎಸ್‍ಪಿ ಶಂಕರಗೌಡ ಪಾಟೀಲರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಹುತೇಕರು ಎಲೆಮರೆಗಳಂತೆ ಸಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಸಾದಕÀರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಕೆಲಸಗಳನ್ನು ಸಂಘ ಸಂಸ್ಥೆಗಳು ಮಾಡಬೇಕು ಈ ಮೂಲಕ ಸ್ವಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಮಾತನಾಡಿ, ಪ್ರತಿವರ್ಷ ಬೀದಿಬದಿ ವ್ಯಾಪಾರಿಗಳ ಸಂಘದ ಸಮಾವೇಶದಲ್ಲಿ ಸಾಧಕರಿಗೆ ಸನ್ಮಾನಿಸಿ ಗೌರವಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಈ ವರ್ಷ ನಡೆದ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ಸಾಧಕರಾದ ಡಿವೈಎಸ್‍ಪಿ ಶಂಕರಗೌಡ ಪಾಟೀಲ್ ಅವರನ್ನು ಈ ದಿನದ ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತಿದೆ. ಸಂಘದ ಸನ್ಮಾನ ಸ್ವೀಕರಿಸಿದ ಅವರಿಗೆ ಬೀದಿಬದಿ ವ್ಯಾಪಾರಿಗಳ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಬ್ಯಾಂಕಿನ ಮಾಜಿ ಅಧಿಕಾರಿ ದೊಡ್ಡಮನಿ ಮತ್ತು ಹರಳಗುಂಡಗಿ ಗ್ರಾಪಂ ಸದಸ್ಯ ಲಿಂಗರಾಜ ಕಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ.ವೇದಮೂತಿ, ಉಮೇಶ, ಮನಿಷ ಬಇ, ಚಂದ್ರಹಾ ಚಿದ್ರಿ, ಲಕ್ಷ್ಮೀ ಬಾಜ್ಜಿ, ರಾಘವೇಂದ್ರ ಕುಲಕರ್ಣಿ, ಬಾಬು ಪರಿಟ್, ರೋಹಿತ ಮಂಗಳೂರ, ಶಂಭುಲಿಂಗ, ಸಚಿನ ಫರತಾಬಾದ ಮತ್ತು ಜೈಕನ್ನಡ ಸೇನೆ ಅಧ್ಯಕ್ಷ ದತ್ತು ಭಾಸಗಿ ಸೇರಿದಂತೆ ಹಲವರಿದ್ದರು.