ಡಿವೈಎಸ್ಪಿ ಆರ್ ಉಜ್ಜಿನಿಕೊಪ್ಪ ರಾಷ್ಟ್ರಪತಿ ಪದಕಕ್ಕೆ ಆಯ್ಕೆ

ಕಾರಟಗಿ:ಡಿ:26: ರಾಷ್ಟ್ರಪತಿಗಳ ಪದಕಕ್ಕೆ ಕೊಪ್ಪಳ ಜಿಲ್ಲೆಯ ಡಿವೈಎಸ್ಪಿ ಆರ್.ಉಜ್ಜಿನಿಕೊಪ್ಪರವರು ಆಯ್ಕೆಯಾಗಿ ಜಿಲ್ಲೆಯ ಪೊಲೀಸ್ ಇಲಾಖೆಯ ಗೌರವಕ್ಕೆ ಪಾತ್ರರಾಗಿದ್ದಾರೆ,
ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವಾ ಕಾರ್ಯನಿರ್ವಹಿಸಿ ಪೊಲೀಸ್ ಕರ್ತವ್ಯಕ್ಕೆ ಪಾತ್ರರಾಗಿದ್ದಾರೆ, ರಾಜ್ಯದ 84 ಜನ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು 2018-19 ನೇ ಸಾಲಿನ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪುರಸ್ಕಾರವನ್ನು ದಿ.07.01.2021ರಂದು ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ರಾಜಭವನ ಸಭಾಂಗಣದಲ್ಲಿ ವಿತರಿಸಲಾಗುವುದು. ಅಂದು ರಾಷ್ಟ್ರಪತಿಯ ಪದಕವನ್ನು ಸ್ವೀಕರಿಸಲಿದ್ದಾರೆ,