ಡಿವೈಎಫ್‌ಐ ಕಾರ್ಯಕರ್ತನ ಹತ್ಯೆ ಖಂಡಿಸಿ ಪ್ರತಿಭಟನೆ

ಮಂಗಳೂರು, ಡಿ.೨೮- ಕಾಞಂಗಾಡ್‌ನ ಡಿವೈಎಫ್‌ಐ ಕಾರ್ಯಕರ್ತ ಅಬ್ದುಲ್ ರಹ್ಮಾನ್ ಅವರನ್ನು ಕೊಲೆ ಮಾಡಿದ ದುಷ್ಕೃತ್ಯವನ್ನು ಖಂಡಿಸಿ ಡಿವೈಎಫ್‌ಐ ಕೊಡ್ಲಮೊಗರು ಗ್ರಾಮ ಸಮಿತಿಯ ನೇತೃತ್ವದಲ್ಲಿ ಬಾಕ್ರಬೈಲ್ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ, ಸಿಪಿಎಂ ನಾಯಕ ಮೊಯ್ದಿನ್ ಕುಂಞಿ ತಲಕ್ಕಿ ಮಾತನಾಡಿ ಕೇರಳದ ಎಲ್‌ಡಿಎಫ್ ಸರಕಾರದ ಸಾಧನೆಯನ್ನು ದೇಶ ವಿದೇಶಗಳಲ್ಲಿ ಕೊಂಡಾಡುವ ಈ ಸಂದರ್ಭದಲ್ಲಿ ಹತಾಶೆಗೊಂಡಿರುವ ಮುಸ್ಲಿಂ ಲೀಗ್ ಅಮಾಯಕ ಮುಸ್ಲಿಂ ಯುವಕರನ್ನೇ ಟಾರ್ಗೆಟ್ ಮಾಡಿ ಕೊಲೆ ರಾಜಕೀಯ ನಡೆಸಿರುವುದು ಖಂಡನೀಯ ಎಂದರು. ಸಿಪಿಎಂ ಮಂಜೇಶ್ವರ ವಲಯ ಸಮಿತಿಯ ಸದಸ್ಯ, ವರ್ಕಾಡಿ ಗ್ರಾಪಂ ಸದಸ್ಯೆ ಭಾರತಿ ಎಸ್., ಸಿಪಿಎಂ ಕೊಡ್ಲಮೊಗರು ಲೋಕಲ್ ಸಮಿತಿ ಸದಸ್ಯ ರವೀಂದ್ರ ಎಂ.ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್‌ಐ ಕೊಡ್ಲಮೊಗರು ಗ್ರಾಮ ಸಮಿತಿಯ ನಾಯಕರಾದ ಅಶ್ರಫ್ ಬಾಕ್ರಬೈಲ್, ಸುಜಿತ್ ಕುಮಾರ್, ಯಶೋದಾ, ಅಬ್ದುಲ್ಲಾ ಕುಂಞಿ,ಆನಂದ ಕಂಪ, ಹಾರಿಸ್, ಇಬ್ರಾಹೀಂ, ಬಶೀರ್, ಇಸ್ಮಾಯೀಲ್, ಸಿಪಿಎಂ ನಾಯಕರಾದ ಅಬೂಬಕರ್, ಲೋಕೇಶ್ ಶೆಟ್ಟಿ, ಸೀತಾರಾಮ ಕಂಪ, ಮುಹಮ್ಮದ್ ರಫೀಕ್, ಅಹ್ಮದ್ ಕುಂಞಿ, ಸಂಜೀವ ಎಂ. ವಹಿಸಿದ್ದರು.