ಡಿವಿಡೆಂಟ್ ಚೆಕ್ ಸಿಎಂಗೆ ಹಸ್ತಾಂತರಿಸಿದ ವಜ್ಜಲ್

ರಾಯಚೂರು,ಜ.೫- ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಆಡಳಿತ ಮಂಡಳಿಯ ಅಧ್ಯಕ್ಷ ಮಾನಪ್ಪ ಡಿ ವಜ್ಜಲ್ ಅವರು ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ಸರಕಾರಕ್ಕೆ ೨೦೧೯-೨೦೨೦ ರ ಸಾಲಿನ ಡಿವಿಡೆಂಟ್ ಫಂಡ್ ೧೧,೦೦,೯೩,೦೦೦. (ಹನ್ನೊಂದು ಕೋಟಿ ತ್ತೊಂಬತ್ತಮೂರು ಸಾವಿರ) ರೂಪಾಯಿಗಳ ಚೇಕ್ ಅನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿ ಕಂಪನಿಯ ಅಭಿವೃದ್ಧಿಗೆ ಮತ್ತು ಕಾರ್ಮಿಕರ ರಕ್ಷಣೆ ಹಾಗೂ ಇನ್ನೂ ಹೆಚ್ಚಿನ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕಂಪನಿಯೊಂದಿಗೆ ಸರಕಾರದ ಸಾಹಕಾರಕ್ಕಾಗಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭೂ ಮತ್ತು ಗಣಿ ವಿಜ್ಞಾನ ಸಚಿವ ಸಿ. ಸಿ.ಪಾಟೀಲ್, ಮುಖ್ಯ ಕಾರ್ಯದರ್ಶಿ ಕುಮಾರ್ ನಾಯ್ಕ, ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಸಲ್ಮಾ ಪಾಹಿಮಾ, ಕಂಪನಿಯ ಹಣಕಾಸು ವಿಭಾಗದ ಮುಖ್ಯಸ್ಥರು ಹಾಗೂ ಅಡಳಿತ ಮಂಡಳಿಯ ಮುಖ್ಯಸ್ಥರು ಉಪಸ್ಥಿತರಿದ್ದರು.