ಡಿಯೋ-ಎರಡು ಆಕ್ಟೀವಾ ಸ್ಕೂಟರ್‌ ನಡುವೆ ಅಪಘಾತ: ಸವಾರ ಮೃತ್ಯು

ಬಂಟ್ವಾಳ, ಜ.೧೩- ಸಜೀಪಮೂಡ ಗ್ರಾಮದ ಪೆಲತ್ತಕಟ್ಟೆಯಲ್ಲಿ ಡಿಯೋ ಹಾಗೂ ಎರಡು ಆಕ್ವೀವಾ ಸ್ಕೂಟರ್‌ಗಳ ಮಧ್ಯೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾರೆ.

ಮೃತಪಟ್ಟ ಡಿಯೋ ಸವಾರನನ್ನು ಇಮ್ರಾನ್ (21) ಎಂದು ಗುರುತಿಸಲಾಗಿದೆ. ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜ. 12ರಂದು ಮೃತಪಟ್ಟಿದ್ದಾರೆ. ಇಮ್ರಾನ್ ಅವರು ಮೂಲತಃ ಕಾಸರಗೋಡಿನವರಾಗಿದ್ದು, ಬೊಳ್ಳಾಯಿಯಲ್ಲಿ ವಾಸಿಸುತ್ತಿದ್ದರು. ಅವರು ಜ. 11ರಂದು ತಮ್ಮ ಸಂಬಂಧಿಕ 12 ವರ್ಷದ ಬಾಲಕ ಮುಬಾಶಿರ್ ಅವರನ್ನು ಕರೆದುಕೊಂಡು ಸಜೀಪನಡುವಿಗೆ ಹೋಗುತ್ತಿದ್ದಾಗ ಘಟನೆ ನಡೆದಿದ್ದು, ಪ್ರಸ್ತುತ ಮುಬಾಶಿರ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದೆರಡು ಸ್ಕೂಟರ್‌ಗಳ ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ತನ್ನ ಆಟೋದಲ್ಲಿ ಸಾಗಿಸಿದ್ದ ವಿಠಲ ಕಂದೂರು ಅವರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ