
ಕಲಬುರಗಿ,ಸೆ.06:ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯ ಅಂತ್ಯೋದಯ ಅನ್ನ ಹಾಗೂ ಆದ್ಯತಾ ಪಡಿತರ ಚೀಟಿಯ ಅರ್ಹ ಫಲಾನುಭವಿಗಳಿಗೆ 5 ಕೆ.ಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ಪ್ರತಿ ಸದಸ್ಯರಿಗೆ 170 ರೂ.ರಂತೆ ಪಡಿತರ ಚೀಟಿಯ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ.
ಆದರೆ ಕೆಲವು ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಇ-ಕೆವೈಸಿ ಹಾಗೂ ಇನ್ನಿತರೆ ತಾಂತ್ರಿಕ ಸಮಸ್ಯೆಗಳಿಂದ ಹಣ ಜಮೆ ಆಗುತ್ತಿಲ್ಲ. ಅಂತಹ ಪಡಿತರ ಚೀಟಿದಾರರ ಸಮಸ್ಯೆಗಳ ನಿವಾರಣೆಗಾಗಿ ಜಿಲ್ಲೆಯ ಆಯಾ ತಾಲ್ಲೂಕುಗಳಲ್ಲಿ ತಹಸೀಲ್ದಾರರ ಕಾರ್ಯಾಲಯದಲ್ಲಿನ ಆಹಾರ ಶಾಖೆಯಲ್ಲಿನ ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಿ ಸಂಬಂಧಪಟ್ಟ ಆಹಾರ ನಿರೀಕ್ಷಕರುಗಳನ್ನು ನೇಮಿಸಿ ಆದೇಶಿಸಲಾಗಿದೆ ಎಂದು ಕಲಬುರಗಿ ಆಹಾರ ಮತ್ತು ನಾಘರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಜಿ.ಗುಣಕಿ ಅವರು ಆದೇಶಿಸಿದ್ದಾರೆ.
ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮೆಯಾಗದೇ ಇರುವ ಜಿಲ್ಲೆಯ ಪಡಿತರ ಚೀಟಿದಾರರು ಸಂಬಂಧಪಟ್ಟ ತಮ್ಮ ತಾಲೂಕಿನ ಸಹಾಯವಾಣಿ ಕೇಂದ್ರಗಳ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ತಾಲೂಕುವಾರು ಸಹಾಯವಾಣಿ ಕೇಂದ್ರಕ್ಕೆ ನೇಮಿಸಿದ ಸಿಬ್ಬಂದಿಗಳ ಹೆಸರು ಹಾಗೂ ಮೊಬೈಲ್ ಸಂಖ್ಯೆ ವಿವರ ಇಂತಿದೆ.
ಅಫಜಲಪೂರ ತಾಲೂಕು: ಆಹಾರ ನಿರೀಕ್ಷಕ ಅರವಿಂದ ಅಂಗಡಿ ಮೊಬೈಲ್ ಸಂಖ್ಯೆ 8147744685. ಆಳಂದ ತಾಲೂಕು: ಆಹಾರ ನಿರೀಕ್ಷಕ ಸತ್ಯನಾರಾಂiÀiಣ ಇವರ ಮೊಬೈಲ್ ಸಂಖ್ಯೆ 9845445998. ಚಿಂಚೋಳಿ ತಾಲೂಕು: ಆಹಾರ ನಿರೀಕ್ಷಕ ವಿರೇಂದ್ರ ಓತಗಿ ಇವರ ಮೊಬೈಲ್ ಸಂಖ್ಯೆ 8152920051. ಚಿತ್ತಾಪೂರ ತಾಲೂಕು: ಆಹಾರ ನಿರೀಕ್ಷಕ ಹೀರಾಸಿಂಗ್ ಚವ್ಹಾಣ ಇವರ ಮೊಬೈಲ್ ಸಂಖ್ಯೆ 9845074767. ಕಲಬುರಗಿ (ನಗರ): ಆಹಾರ ನಿರೀಕ್ಷಕಿ ಭಾರತಿ ಪಾಟೀಲ ಇವರ ಮೊಬೈಲ್ ಸಂಖ್ಯೆ 8867576591. ಕಲಬುರಗಿ (ಗ್ರಾಮೀಣ): ಆಹಾರ ನಿರೀಕ್ಷಕ ಪ್ರವೀಣಕುಮಾರ ಸಾತನೂರ ಇವರ ಮೊಬೈಲ್ ಸಂಖ್ಯೆ 9741168538.
ಜೇವರ್ಗಿ ತಾಲೂಕು: ಆಹಾರ ನಿರೀಕ್ಷಕ ಸವಿತಾ ಇವರ ಮೊಬೈಲ್ ಸಂಖ್ಯೆ 9886323776. ಸೇಡಂ ತಾಲೂಕು: ದ್ವಿ.ದ.ಸ. ಮಗದುಮ್ ಹುಸೇನ್ ಇವರ ಮೊಬೈಲ್ ಸಂಖ್ಯೆ 8884097863. ಯಡ್ರಾಮಿ ತಾಲೂಕು: ಆಹಾರ ನಿರೀಕ್ಷಕಿ ಸುರೇಖಾ ಇವರ ಮೊಬೈಲ್ ಸಂಖ್ಯೆ 9108704065. ಕಮಲಾಪೂರ ತಾಲೂಕು: ಆಹಾರ ನಿರೀಕ್ಷಕ ಸಂತೋಷ ಮೈಲಾರಿ ಇವರ ಮೊಬೈಲ್ ಸಂಖ್ಯೆ 9880697441. ಕಾಳಗಿ ತಾಲೂಕು: ಆಹಾರ ನಿರೀಕ್ಷಕ ರೇವಣಸಿದ್ದಯ್ಯ ಸ್ವಾಮಿ ಇವರ ಮೊಬೈಲ್ ಸಂಖ್ಯೆ 9449266885. ಶಹಾಬಾದ (ಪ): ಆಹಾರ ನಿರೀಕ್ಷಕ ಯಲ್ಲಾಲಿಂಗ್ ಇವರ ಮೊಬೈಲ್ ಸಂಖ್ಯೆ 9535035253. ಶಹಾಬಾದ (ಗ್ರಾ): ಆಹಾರ ನಿರೀಕ್ಷಕ ಶ್ರೀಕಾಂತ ಇವರ ಮೊಬೈಲ್ ಸಂಖ್ಯೆ 9986546599.