ಡಿಪ್ಲೊಮಾ ಕೋರ್ಸ್ ಇನ್ ಮ್ಯೂಸಿಕ್ ಗೆ ಅವಕಾಶ ಲಭ್ಯ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೨೦: ಸಂಗೀತ ಕ್ಷೇತ್ರದಲ್ಲಿ ಪದವಿ ಪರೀಕ್ಷೆ ನಡೆಸಲು ಮಹತೀ  ಸಾಂಸ್ಕೃತಿಕ ಕಲಾ ಸಂಸ್ಥೆಗೆ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಿಂದ ಮಾನ್ಯತೆ ದೊರೆತಿದೆ ಎಂದು ಸಂಸ್ಥೆಯ ಎಂ. ದ್ವಾರಕೀಶ್ ತಿಳಿಸಿದರು.ಸುದ್ದಿಗೋಷ್ಠಿ‌ಯಲ್ಲಿ ಈ ವಿಷಯ ತಿಳಿಸಿದ ಅವರು, 2023-24 ನೇ ಸಾಲಿನಿಂದ ಸಂಗೀತ ಕ್ಷೇತ್ರದಲ್ಲಿ ಸರ್ಟಿಫಿಕೇಟ್ ಕೋರ್ಸ್ ಇನ್ ಮ್ಯೂಸಿಕ್, ಡಿಪ್ಲೊಮಾ ಕೋರ್ಸ್ ಇನ್ ಮ್ಯೂಸಿಕ್, ಬ್ಯಾಚಲರ್ ಇನ್ ಫರ್ ಫಾರ್ಮೆನ್ಸ್ ಆರ್ಟ್ಸ್ ಪರೀಕ್ಷೆ ನಡೆಸಲು ಅನುಮತಿ ದೊರೆತಿದೆ ಎಂದು ತಿಳಿಸಿದರು.ಸಂಗೀತ ಕ್ಷೇತ್ರದಲ್ಲಿ ಈವರೆಗೆ ಪದವಿ ಪಡೆಯುವ ಅವಕಾಶ ಇರಲಿಲ್ಲ. ಈಗ ದಾವಣಗೆರೆಯಲ್ಲಿ ಬಿ ಮ್ಯೂಸಿಕ್, ಎಂ ಮ್ಯೂಸಿಕ್ ಕಲಿಕೆಗೆ ಅವಕಾಶ ನೀಡಲಾಗಿದೆ. ಅಧ್ಯಯನ ಶಿಕ್ಷಣ ಕೇಂದ್ರ ಗಳ ಮೂಲಕ ಸಂಗೀತದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆಯಲು ಸಂಗೀತಾಸಕ್ತರಿಗೆ ಅವಕಾಶ ಇದೆ. ಮೊದಲು ಪದವಿ ಕೋರ್ಸ್ ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಪದವಿ ಗೆ ಅವಕಾಶ ಇದೆ ಎಂದು ತಿಳಿಸಿದರು.ಸಂಗೀತ ಕಲಿತಂತಹವರಿಗೆ ಮುಂದಿನ ಜೀವನ ಹೇಗೆ ಎಂಬುದರ ಮಾಹಿತಿ ಇಲ್ಲ.ಹಾಗಾಗಿ ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಸಂಗೀತ ಪದವೀಧರರಿಗೆ ಶಾಲಾ, ಕಾಲೇಜುಗಳಲ್ಲಿ ಉದ್ಯೋಗ ಒದಗಿಸಿಕೊಡುವ ಚಿಂತನೆ ನಡೆಸಿದೆ ಎಂದು ತಿಳಿಸಿದರು.ಸರ್ಟಿಫಿಕೇಟ್ ಕೋರ್ಸ್ ಇನ್ ಮ್ಯೂಸಿಕ್ ಮತ್ತು ಡಿಪ್ಲೊಮಾ ಕೋರ್ಸ್ ಇನ್ ಮ್ಯೂಸಿಕ್ ಒಂದು ವರ್ಷ, ಬಿಪಿಎ ಮೂರು ವರ್ಷದ ಕೋರ್ಸ್ ಆಗಿದೆ. ಡಿಪ್ಲೊಮಾ ಕ್ಕೆ ಪಿಯುಸಿ ಆಗಿರಬೇಕು. ಸರ್ಟಿಫಿಕೇಟ್ ಕೋರ್ಸ್ ಗೆ ಎಸ್ಸೆಸ್ಸೆಲ್ಸಿ ಆಗಿರಬೇಕು. ಆದರೂ, ವಿನಾಯಿತಿ ನೀಡಬೇಕು ಎಂದು ಒತ್ತಾಯ ಇದೆ. ಪ್ರೌಢ ಶಿಕ್ಷಣ ಮಂಡಳಿ ಯಿಂದ ನಡೆಸಲಾಗುವ ಜ್ಯೂನಿಯರ್ ಗೆ ಹತ್ತು ವರ್ಷ ನಿಗದಿ ಮಾಡಲಾಗಿದೆ. ಅದೇ ಮಾನದಂಡ ಅನುಸರಿಸಬೇಕು ಎಂದು ತಿಳಿಸಿದರು.ಹೆಚ್ಚಿನ ಮಾಹಿತಿಗಾಗಿ 94488 72944, 99860 44145 ಸಂಪರ್ಕಿಸಬಹುದು ಎಂದು ತಿಳಿಸಿದರು. ಹರ್ಷ ಪುರೋಹಿತ್, ನಾಗಶ್ರೀ, ಸವಿತಾ ಕೂಲಂಬಿ ಸುದ್ದಿಗೋಷ್ಠಿ‌ ಯಲ್ಲಿದ್ದರು.