ಡಿಡಿಪಿಐ ಆಗಿ ತಿಪ್ಪೇಶಪ್ಪ ಅಧಿಕಾರ ಸ್ವೀಕಾರ

 ದಾವಣಗೆರೆ.ನ.೧೩;  ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾಗಿ  ಜಿ. ಆರ್. ತಿಪ್ಪೇಶಪ್ಪ ಅಧಿಕಾರ ವಹಿಸಿಕೊಂಡರು. ತಿಪ್ಪೇಶಪ್ಪ ಅವರು ಈ ಹಿಂದೆ ಚನ್ನಗಿರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ,  ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾಗಿ ಮತ್ತು ಚಿತ್ರದುರ್ಗದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದ್ದಾರೆ .ಇವರಿಗೆ ಶಿಕ್ಷಣ ಇಲಾಖೆಯ ಪತ್ರಾಂಕಿತ ಸಹಾಯಕರಾದ  ಬಿ. ಶ್ರೀನಿವಾಸ ನಾಯಕ, ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.