ಡಿಜಿಪಿ ಗೆ ಬಡ್ತಿ ಪಡೆದ ಕಮಲ್ ಪಂತ್ ಕಮೀಷನರ್ ಆಗಿ ಮುಂದುವರಿಕೆ

ಬೆಂಗಳೂರು,ಏ.29-ಪೊಲೀಸ್ ಮಹಾನಿರ್ದೆಶಕ(ಡಿಜಿಪಿ) ಹುದ್ದೆಗೆ ಬಡ್ತಿ ಹೊಂದಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರನ್ನು ಅದೇ ಹುದ್ದೆಯಲ್ಲಿ‌ ಮುಂದುವರೆಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೆಶಕ (ಎಡಿಜಿಪಿ)ದರ್ಜೆಯಲ್ಲಿದ್ದ ನಗರ ಪೊಲೀಸ್ ಆಯುಕ್ತರ ಹುದ್ದೆಯನ್ನು ಡಿಜಿಪಿಗೆ ಮೇಲ್ದರ್ಜೆಗೆ ಏರಿಸಿ ಬಡ್ತಿ ಪಡೆದ ಕಮಲ್ ಪಂತ್ ಅವರನ್ನು ಮುಂದುವರೆಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ನಗರ ಪೊಲೀಸ್ ಆಯುಕ್ತರ ಹುದ್ದೆಯ ನಿರೀಕ್ಷೆಯಲ್ಲಿದ್ದ ಸುಮಾರು 20ಮಂದಿ ಎಡಿಜಿಪಿ ಅಧಿಕಾರಿಗಳನ್ನು ನಿರಾಸೆಗೊಳಿಸಿದೆ.
ಅಜಯ್ ಕುಮಾರ್ ಸಿಂಗ್ ಅವರ ನಂತರ
ಕಮಲ್ ಪಂತ್ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ಪಡೆದರೂ ನಗರ ಪೊಲೀಸ್ ಆಯುಕ್ತ ರಾಗಿ ಮುಂದುವರೆಯುವ ಅವಕಾಶ ದೊರೆತಿದೆ.
ದೆಹಲಿ ಮೂಲದ ಕಮಲ್ ಪಂತ್  1990ರ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದು. ಡಿಜಿಪಿ(ತರಬೇತಿ) ಪಿಕೆ ಗರ್ಗ್ ಅವರ ಅಧಿಕಾರವಧಿ ಕೂಡ ಏಪ್ರಿಲ್ 30ಕ್ಕೆ ಮುಗಿದ ಬೆನ್ನಲ್ಲೇ ಬಡ್ತಿ ದೊರೆತಿದೆ.
ನಗರ ಪೊಲೀಸ್ ಆಯುಕ್ತರ ಹುದ್ದೆಯಿಂದ ಕಮಲ್ ಪಂತ್ ಅವರನ್ನು ಕೆಳಗಿಳಿಸಲು ಸರ್ಕಾರಕ್ಕೆ ಆಸಕ್ತಿಯಿಲ್ಲದ ಹಾಗೂ ಆಯುಕ್ತರಾಗಿ ಒಂದು ವರ್ಷ ಪೂರ್ಣವಾಗಿಲ್ಲದಿರುವುದರಿಂದ ಅವರನ್ನೇ ಮುಂದುವರೆಸಲಾಗಿದೆ..
ಕಮಲ್ ಪಂತ್ ಅವರ ಅಧಿಕಾರವದಿಯಲ್ಲಿ ಯಾವುದೇ ವಿವಾದಗಳಿಲ್ಲದೇ ದಕ್ಷತೆಯಿಂದ ನಡೆಸಿದ ಕಾರ್ಯೈಖರಿಯಿಂದಾಗಿ ಸರ್ಕಾರ ಅವರನ್ನೇ ಮುಂದುವರಿಸಲು ನಿರ್ಧರಿಸಿ ಆದೇಶ ಹೊರಡಿಸಿದೆ.