ಡಿಜಿಟಲ್ ಸಾಮಾಜಿಕ ಮಾಧ್ಯಮಗಳ ಮೂಲಕ ವಿಜ್ಞಾನ ಸಂವಹನ ಕಾರ್ಯಾಗಾರದ ಉದ್ಘಾಟನೆ


ಸಂಜೆವಾಣಿ ವಾರ್ತೆ
ಕೊಪ್ಪಳ- ನಗರದ ಗ.ವಿ.ವ. ಟ್ರಸ್ಟ್‍ನ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ  ಹಾಗೂ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ನವದೆಹಲಿ ಇವರಿಂದ ಪ್ರಾಯೋಜಿತ ಮತ್ತು ಸೇವಕ್ ಸಂಸ್ಥೆ ಬೆಳಗಾವಿ ಇವರಿಂದ  ಅನುಷ್ಠಾನಿತ 3 ದಿನಗಳ ಕಾಲ ಡಿಜಿಟಲ್ ಸಾಮಾಜಿಕ ಮಾಧ್ಯಮಗಳ ಮೂಲಕ ವಿಜ್ಞಾನ ಸಂವಹನ ಕಾರ್ಯಾಗಾರವನ್ನು ಇಂದು 23.11.2023 ಬೆಳಿಗ್ಗೆ 11-00 ಕ್ಕೆ ಮಹಾವಿದ್ಯಾಲಯದ ಸಭಾಭವನದಲ್ಲಿ ಉದ್ಘಾಟನಾ ಸಮಾರಂಭ ಜರುಗಿತು.
  ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಗ.ಆ.ಮ. ನಿರ್ದೇಶಕರಾದ ಡಾ.ಪ್ರವೀಣ ವೈದ್ಯ ಮಾತನಾಡಿ ಪ್ರಸ್ತುತ ದಿನದಲ್ಲಿ  ಡಿಜಿಟಲ್ ಸಾಮಾಜಿಕ ಮಾಧ್ಯಮಗಳು ಶಿಕ್ಷಕರಿಗೆ ಅತ್ಯಂತ ಅವಶ್ಯಕವಾಗಿದ್ದು ಅವುಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸಹಾಯಕಾರಿಯಾಗಿವೆ. ಮಕ್ಕಳ ಮನಸ್ಸನ್ನು ಕೇಂದ್ರಿಕರಿಸಿ ಅವರಿಗೆ ವಿಷಯಗಳ ಅರ್ಥ ಮಾಡಿಸುವಲ್ಲಿ, ಪ್ರಾಯೋಗಿಕ ಜ್ಞಾನ ಬೆಳೆಸುವಲ್ಲಿ  ಡಿಜಿಟಲ್ ಸಾಮಾಜಿಕ ಮಾಧ್ಯಮಗಳು ಮಹತ್ತರ ಪಾತ್ರ ವಹಿಸುತ್ತವೆ. ಭಾವಿ ಶಿಕ್ಷಕರುಗಳಿಗೆ ಇಂತಹ ಜ್ಞಾನವುಳ್ಳ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವದು ಮಹತ್ವಪೂರ್ಣವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿದ್ದ      ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪ್ರವೀಣ ಡಿ.ಎಸ್ ಮಾತನಾಡಿ ಶಿಕ್ಷಕ ತಂತ್ರಜ್ಞಾನವನ್ನು ತರಗತಿ ಕೋಣೆಗೆ ತರುವುದರ ಮೂಲಕ ಈಡಿ ಜಗತ್ತನ್ನು ಪರಿಚಯಿಸುವ ಕಾರ್ಯವನ್ನು ಮಾಡಬೇಕಿದೆ. ಇದಕ್ಕೆ ಶಿಕ್ಷಕರ ಇಚ್ಛಾಶಕ್ತಿ ಅವಶ್ಯಕ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯರಾದ ಡಾ.ಎಸ್.ಬಿ.ಕಂಬಾರ್ ಮಾತನಾಡಿ ನೀವು ತರಬೇತಿಯಲ್ಲಿ ಪಡೆಯುವ ಜ್ಞಾನ ಕೌಶಲ್ಯಗಳನ್ನು ನಿಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಿಮ್ಮ ಜ್ಞಾನವನ್ನು ಮುಂದಿನ ತಲೆಮಾರಿಗೆ ವರ್ಗಾವಣೆ ಮಾಡುವ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿಯ ಸೇವಕ್ ಸಂಸ್ಥೆಯ ಕಾರ್ಯದರ್ಶಿಗಳಾದ ಆನಂದ ಲೊಬೋ ಅವರು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ನವದೆಹಲಿ ಈ ಇಲಾಖೆಗಳೊಂದಿಗೆ ನಮ್ಮ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಕಾರ್ಯ ಮಾಡುತಿದ್ದು ವಿವಿಧ ಹಂತದ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕದ ಆರು ಧಾರವಾಡ,ಕೊಪ್ಪಳ,ಬೆಳಗಾವಿ,ವಿಜಯಪುರ,ರಾಯಚೂರ ಹಾಗೂ ದಾವಣಗೇರಿ ಜಿಲ್ಲೆಗಳಲ್ಲಿ ಹಮಿಕೊಳ್ಳಲಾಗುತಿದ್ದು ಮೊದಲು ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವದು ಸಂತಸಕರ ವಿಷಯ. ನಮ್ಮ ಸೇವಕ ಸಂಸ್ಥೆಯು ಬಾಲ್ಯ ವಿವಾಹ,ದೇವದಾಸಿ ಪದ್ದತಿಯ ತಡೆಗಟ್ಟುವಿಕೆ ಹಾಗೂ ಮಹಿಳಾ ಶೋಷಣೆಯನ್ನು ತಡೆಗಟ್ಟುವ ಕಾರ್ಯದಲ್ಲಿ ಸೇವೆ ಮಾಡುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಸೇವಕ್ ಸಂಸ್ಥೆಯ ಸಂಯೋಜಕರಾದ ಬರ್ಮಾ ಗುಡುಮಕೇರಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಾದ ರಮ್ಯ ಎಚ್.ಎಸ್. ರಜತ್ ಸಹಾಯಕ ಪ್ರಾಧ್ಯಾಪಕರಾದ ಡಾ.ಆನಂದರಾವ್ ದೇಸಾಯಿ ಗಂಗಾಧರ ಸೊಪ್ಪಿಮಠ ಶೈಲಜಾ ಅರಳಲೇಮಠ ಶ್ರೀಧರ ಪೂಜಾರಿ ಡಾ ನೀಲಾಂಭಿಕೆ ಹುದ್ಧಾರ್ ದೇವರಾಜ ದೇವೆಂದ್ರ. ಜಂಭಯ್ಯ ಶಿವಕುಮಾರ ಅನಿತಾ ಸೇರಿದಂತೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.ಯಾಸ್ಮೀನ್ ಪ್ರಾರ್ಥಿಸಿದರು ಪರಶುರಾಮ ಸ್ವಾಗತಿಸಿದರು. ಶೈಲಜಾ ಗೌಡರ್ ವಂದನಾರ್ಪಣೆ ಮಾಡಿದರು.ಅನನ್ಯ ನಿರೂಪಿಸಿದರು.                   
           
                      :