ಡಿಜಿಟಲ್ ಸಹಿ ವ್ಯವಸ್ಥೆಗೆ ಮನವಿ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು12 : ತಾಲೂಕಿನ ಯಳವತ್ತಿ ಯತ್ತಿನಹಳ್ಳಿ ಮತ್ತು ಮಾಡಳ್ಳಿ ಗ್ರಾಮದ ರೈತರು ಯಳವತ್ತಿಯಲ್ಲಿರುವ ಕರ್ನಾಟಕ ವಿಕಾಸ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆಯಲು ಅಲ್ಲಿನ ವ್ಯವಸ್ಥಾಪಕರಿಗೆ ಡಿಜಿಟಲ್ ಸಹಿ ವ್ಯವಸ್ಥೆ ಇಲ್ಲದಿರುವುದರಿಂದ ರೈತರು ಸಾಲ ಪಡೆಯಲು ಪರದಾಡಬೇಕಾಗಿದ್ದು ಕೂಡಲೆ ಈ ವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಗದಗನಲ್ಲಿರುವ ಮುಖ್ಯ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿ ಕೆವಿಜಿಯ ವ್ಯವಸ್ಥಾಪಕರು ಡಿಜಿಟಲ್ ಸಹಿ ವ್ಯವಸ್ಥೆಯನ್ನು ಕಲ್ಪಿಸುವುದು ಖಾಸಗಿ ಅವರಿಗೆ ನೀಡಲಾಗಿರುತ್ತದೆ. ಇನ್ನೊಂದು ವಾರದಲ್ಲಿ ಯಳವತ್ತಿಯ ವ್ಯವಸ್ಥಾಪಕರ ಡಿಜಿಟಲ್ ಸಹಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮಾಡಳ್ಳಿ ಯತ್ನಳ್ಳಿ ಮತ್ತು ಯಳವತ್ತಿ ಗ್ರಾಮದ ರೈತರು ಈ ಸಂದರ್ಭದಲ್ಲಿ ಇದ್ದರು.