ಡಿಜಿಟಲ್ ವಹಿವಾಟಿನ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಕಲಬುರಗಿ,ಫೆ,10:ಕಲಬುರಗಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಇವುಗಳ ಸಂಯುಕ್ತಾಶ್ರಯದಲ್ಲಿ ಮಹಾನಗರಪಾಲಿಕೆ ಪಕ್ಕದಲ್ಲಿರುವ ದಿ ಐಡಿಯಲ್ ಫೈನ್ ಆರ್ಟ್ ಕಾಲೇಜಿನ ಸಭಾಂಗಣದಲ್ಲಿ ಸ್ವ ನಿಧಿ ಸೇ ಸಮೃದ್ಧಿ ಮಹೋತ್ಸವದ ಅಂಗವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಡಿಜಿಟಲ್ ವಹಿವಾಟಿನ ತರಬೇತಿ ಕಾರ್ಯಕ್ರಮವನ್ನು ಕಲಬುರಗಿ ಮಹಾನಗರಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ರಾದ ಆರ್.ಪಿ. ಜಾಧವ ಅವರು ಶುಕ್ರವಾರ ಉದ್ಘಾಟಿಸಿದರು.

  ಕಾರ್ಯಕ್ರಮದಲ್ಲಿ ಸಿಎಓ ವಿಜಯಲಕ್ಷ್ಮೀ, ಮಹಾನಗರ ಪಾಲಿಕೆಯ ವಲಯ-3ರ ಆಯುಕ್ತರಾದ ಪ್ರಿಯಾಂಕಾ ದನ್ನಾಶ್ರೀ, ಕಲಬುರಗಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನ ವಿಭಾಗೀಯ ಕಚೇರಿಯ ಕ್ರೆಡಲ್ ವಿಂಗ್ ಅಧಿಕಾರಿ ರವಿಕುಮಾರ ಇಂಗಳಗಿ, ಜಿಲ್ಲಾ ಕೌಶಲ್ಯ ಮಿಷನ್‍ನ ವ್ಯವಸ್ಥಾಪಕ ರಾಜಕುಮಾರ ಗುತ್ತೇದಾರ್ ಹಾಗೂ ಆರ್ಥಿಕ ಸಾಕ್ಷರತಾ ಸಲಹೆಗಾರ ಗೋಪಾಲರಾವ ಕುಲಕರ್ಣಿ ಸೇರಿದಂತೆ  ವಿವಿಧ ಬ್ಯಾಂಕ್ ಅಧಿಕಾರಿಗಳು, ಪಟ್ಟಣ ಮಾರಾಟ ಸಮಿತಿ ಸದಸ್ಯರು(ಉ  ಮತ್ತು ದ), ಹಾಗೂ ಡೇ ನಲ್ಮ್ ಶಾಖೆಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.