ಡಿಜಿಟಲ್ ಯುಗದಲ್ಲಿ ಸೈಬರ್ ಭದ್ರತೆ ಬಹಳ ಮುಖ್ಯ: ಪ್ರೊ. ಬಟ್ಟು ಸತ್ಯನಾರಾಯಣ್

ಕಲಬುರಗಿ:ಫೆ.02: ಡಿಜಿಟಲ್ ಯುಗದಲ್ಲಿ ಸೈಬರ್ ಭದ್ರತೆ ಬಹಳ ಮುಖ್ಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ, ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗ (ಎಂಸಿಎ) ಶುಕ್ರವಾರ ಆಯೋಜಿಸಿದ್ದ ಕಂಪ್ಯೂಟರ್ ನೆಟ್‍ವರ್ಕ್‍ಗಳು ಮತ್ತು ಸೈಬರ್ ಭದ್ರತಾ ಬೆದರಿಕೆಗಳ ಕುರಿತು ಮೂರು ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಣಾಮಕಾರಿ ಮತ್ತು ವೇಗದ ಸಂವಹನಕ್ಕಾಗಿ ಕಂಪ್ಯೂಟರ್ ನೆಟ್‍ವಕಿರ್ಂಗ್ ಬಹಳ ಮುಖ್ಯ. ಡಿಜಿಟಲ್ ಇಂಡಿಯಾ ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬಹಳ ಸಹಕಾರಿಯಾಗಿದೆ. ಡಿಜಿಟಲ್ ಇಂಡಿಯಾದಿಂದಾಗಿ ಗ್ರಾಮೀಣ ಜನರು ಸಹ ನಗರ ಜನರಂತೆ ಮುಂದುವರಿದ ತಂತ್ರಜ್ಞಾನ ಮತ್ತು ಮಾರುಕಟ್ಟೆಗಳ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿದೆ. ಇದು ನಗರ ಮತ್ತು ಗ್ರಾಮೀಣ ಭಾರತದ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದೆ ಎಂದರು.
ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್ ಅವರು ಮಾತನಾಡಿ, ಡಿಜಿಟಲೀಕರಣ ಮತ್ತು ನೆಟ್‍ವಕಿರ್ಂಗ್ ವ್ಯವಸ್ಥೆಯು ದೇಶವು ಸಂಪನ್ಮೂಲಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಮತ್ತು ಒಂದು ಸ್ಥಳದಿಂದ ಇನ್ನೊಂದಕ್ಕೆ ಸುಲಭವಾಗಿ ಹಂಚಿಕೊಳ್ಳಲು ಸಹಾಯ ಮಾಡಿದೆ. ಇದರಿಂದ ರಾಷ್ಟ್ರದ ಸಾಮಾಜಿಕ-ಸಾಂಸ್ಕøತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಗಣಕ ವಿಜ್ಞಾನ ವಿಭಾಗದ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಲಾಯಿತು.
ಸಂಘಟನಾ ಕಾರ್ಯದರ್ಶಿ ಡಾ. ನಾಗರಾಜ್ ವಿ. ಧಾರವಾಡಕರ್ ಅವರು ಸಮ್ಮೇಳನದ ವಿಷಯವನ್ನು ಪರಿಚಯಿಸಿ ಅದರ ಹಿಂದಿನ ಉದ್ದೇಶಗಳನ್ನು ವಿವರಿಸಿದರು. ಪೆÇ್ರ. ಶ್ರೀಕಂಠಯ್ಯ ಕೆ.ಸಿ, ಪೆÇ್ರ .ಆರ್.ಎಸ್. ಹೆಗಡಿ, ಏರೋವೈರ್ ಬೆಂಗಳೂರಿನ ಮಂಜುನಾಥ್ ಕಶ್ಯಪ್, ವಿಜಯಪುರದ ಬಿಎಲ್‍ಡಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಡಾ. ಅನಿಲ್ ಕೆ. ಕಣ್ಣೂರು, ಡಾ. ಗುರುರಾಜ್ ಮುಕರಂಬಿ, ಡಾ.ª ÀiÁಧುರಿ ಕಾಗಲೆ, ಡಾ. ಪರಶುರಾಮ್ ಕಾಂಬಳೆ, ಡಾ. ಸುಕನ್ಯಾ, ಕುಮಾರಿ ಶಿಲ್ಪಾ, ಶ್ರೀಮತಿ ಪೂರ್ಣಿಮಾ, ಪರಶುರಾಮ್ ಮತ್ತು ಬಾಪು ಸಮಾರಂಭದಲ್ಲಿ ಉಪಸ್ಥಿತರಿದ್ದರು.