ಡಿಜಿಟಲ್ ಮಾಧ್ಯಮದಲ್ಲಿ ಎಫ್.ಡಿ ಐ ನೀತಿಗೆ ಕೇಂದ್ರ ನಿರ್ಧಾರ

ನವದೆಹಲಿ,ನ.16- ಡಿಜಿಟಲ್ ಮಾದ್ಯಮವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ ಶೇಕಡ 26ಕ್ಕಿಂತ ಕಡಿಮೆ ವಿದೇಶಿ ಬಂಡವಾಳ ಹೂಡಿಕೆ ಇರುವ ಸಂಸ್ಥೆಗಳು ಒಂದು ತಿಂಗಳೊಳಗೆ ನೀತಿ ರೂಪಿಸಿಲು ಮುಂದಾಗಿದೆ‌

ಕಂಪನಿಯ ಹೆಸರು ಮತ್ತು ವಿಳಾಸದ ಜೊತೆಗೆ ನಿರ್ದೇಶಕರು, ಷೇರುದಾರರ ವಿವರ ಸಹಿತ ಕಂಪನಿಯ ಷೇರುಹಂಚಿಕೆ ಪದ್ದತಿ ಸೇರಿ ಕಂಪನಿಸಂಸ್ಥೆಯ ವಿವರಗಳು. ಪ್ರವರ್ತಕರು,ಮಹತ್ವದ ಫಲಾನುಭವಿ ಮಾಲೀಕರ ಹೆಸರು ಮತ್ತು ವಿಳಾಸ, ವಿದೇಶಿ ನೇರ ಬಂಡವಾಳ ನೀತಿಯಡಿ, ವಿದೇಶಿ ವಿನಿಮಯ ನಿರ್ವಹಣೆ ‌‌ ಸೇರಿದಂತೆ ಹಲವು ಮಾಹಿತಿಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಸಲ್ಲಿಸಲು ಸೂಚನೆ ನೀಡಲಾಗಿದೆ.

ಶೇ‌26ಕ್ಕಿಂತ ಅಧಿಕ ವಿದೇಶಿ ಬಂಡವಾಳ ಹೂಡಿಕೆಯೊಂದಿಗೆ ಷೇರು ವ್ಯವಸ್ಥೆ ಹೊಂದಿದ್ದರೆ ಈ ಕೆಳಗಿನ ಸಮಾನ ವಿವರಗಳನ್ನು ನೀಡಬೇಕು, ಒಂದು ತಿಂಗಳೊಳಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಸಲ್ಲಿಸಬೇಕು ಮತ್ತು 2012ರ ಅಕ್ಟೋಬರ್ 15ರೊಳಗೆ ವಿದೇಶಿ ಬಂಡವಾಳ ಹೂಡಿಕೆಯನ್ನು ಶೇ.26ಕ್ಕೆ ತಗ್ಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅದಕ್ಕೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಅನುಮೋದನೆ ಪಡೆಯಬೇಕು ಎಂದು ಹೇಳಿದೆ.

ಯಾವುದೇ ಸಂಸ್ಥೆ ದೇಶಕ್ಕೆ ಯಾವುದೇ ಹೊಸ ವಿದೇಶಿಹೂಡಿಕೆಯನ್ನು ತರಬೇಕಾದರೆ ಅದಕ್ಕೆ ಕೇಂದ್ರ ಸರ್ಕಾರದ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು. ಆಗ ಡಿಪಿಐಐಟಿನ ವಿದೇಶಿ ಹೂಡಿಕೆ ನೆರವು ಪೋರ್ಟಲ್ಈ ಅಗತ್ಯತೆಗಳನ್ನು ಪಾಲಿಸಬೇಕು  ಎಂದು ಹೇಳಿದೆ.

ಡಿಜಿಟಲ್ ಮಾದ್ಯಮದ ಮೂಲಕ ಪ್ರಸಕ್ತ ವ್ಯವಹಾರಗಳು ಮತ್ತು ಸುದ್ದಿಗಳ ಅಪ್ ಲೋಡಿಂಗ್ ಮತ್ತು  ಸ್ಟ್ರೀಮಿಗ್ ಒಳಗೊಂಡಂತೆ ಅರ್ಹ ಸಂಸ್ಥೆಗಳಿಗೆ ಸಹಕರಿಸಲು ಸಾರ್ವಜನಿಕ ನೋಟಿಸ್ ನೀಡಲಾಗಿದೆ.

ಕೇಂದ್ರ ಸರ್ಕಾರ 2019ರ ಸೆಪ್ಟಂಬರ್ 18ರಂದು ಸರ್ಕಾರದ ಅನುಮೋದಿತ ಮಾರ್ಗದಲ್ಲಿ ಶೇ.26ರಷ್ಟು ಎಫ್ ಡಿಐ (ವಿದೇಶಿ ನೇರ ಬಂಡವಾಳ ) ಹೂಡಿಕೆಗೆ ಅನುಮೋದನೆ ನೀಡಿತ್ತು.ಸಾರ್ವಜನಿಕ ನೋಟಿಸ್, ಸಚಿವಾಲಯದ ವೆಬ್ ಸೈಟ್ ನಲ್ಲಿ ಲಭ್ಯವಿದೆ ಮತ್ತು ಇಂದು ಸಚಿವಾಲಯ, ಒಂದು ತಿಂಗಳೊಳಗೆ ನಿರ್ಧಾರದ ಪಾಲನೆಗೆ ಅರ್ಹ ಸಂಸ್ಥೆಗಳು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ವಿವರಿಸಲಾಗಿದೆ. ನೋಟಿಸ್ ನಲ್ಲಿ  ಕೆಳಗಿನಂತೆ ವಿವರಿಸಲಾಗಿದೆ.