ಡಿಜಿಟಲ್ ತಂತ್ರಜ್ಞಾನ ಕೌಶಲ್ಯ ಕಲಿಕೆ ಅಗತ್ಯ : ಪ್ರೊ. ಎಸ್.ಆರ್.ನಿರಂಜನ

ಕಲಬುರಗಿ:ಜ.27:ಡಿಜಿಟಲ್ ತಂತ್ರಜ್ಞಾನ ಬಳಕೆಯೊಂದಿಗೆ ಬೋಧನೆಯಲ್ಲಿ ಕೌಶಲ್ಯ ಕಲಿಕೆ ಹಾಗೂ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯಪೂರ್ಣ ಕಲಿಕೆಗೆ ಆದ್ಯತೆ ನೀಡುತ್ತಿರುವುದರಿಂದ ನಮಗಿಂತಲೂ ಅಮೇರಿಕಾ, ಸಿಂಗಪೂರ್, ಆಸ್ಟ್ರೇಲಿಯಾ, ಜರ್ಮನಿ ಮತ್ತು ಚೀನಾ ದೇಶಗಳು ಶೈಕ್ಷಣಿಕ ಹಾಗೂ ತಾಂತ್ರಿಕವಾಗಿ ಮುಂದುವರಿಯಲು ಸಾಧ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತ ಉಪಾಧ್ಯಕ್ಷ ಪೆÇ್ರ. ಎಸ್. ಆರ್. ನಿರಂಜನ ಹೇಳಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತ ಬೆಂಗಳೂರು, ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ, ಹಾಗೂ ಡಾ. ಪಿ.ಎಸ್. ಶಂಕರ್ ಪ್ರತಿμÁ್ಠನ ಇವುಗಳ ಸಹಯೋಗದಲ್ಲಿ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ “ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ ಉತ್ಕøಷ್ಟತೆಯ ಕಡೆಗೆ ಉನ್ನತ ಶಿಕ್ಷಣದ ಭ್ರಾತೃತ್ವ ಕಲಿಕೆ ಉತ್ತಮಗೊಳಿಸು” ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳಿವೆ. ಜಾಗತಿಕ ಶಿಕ್ಷಣ ಮತ್ತು ತಂತ್ರಜ್ಞಾನ ಬಳಕೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಉತ್ತೇಜಿಸಬೇಕು. ಜಾಗತಿಕ ಮನ್ನಣೆಗೆ ಪೂರಕವಾಗಿ ಅಗತ್ಯ ತಂತ್ರಜ್ಞಾನ ಮತ್ತು ಕೌಶಲ್ಯ ತಂತ್ರಜ್ಞಾನ ತರಬೇತಿಗೆ ಆಧ್ಯತೆ ನೀಡಬೇಕು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಚರ್ಚೆ ಮತ್ತು ಸಂವಾದ ನಡೆಸಿ ಜ್ಞಾನದ ಬಲವರ್ಧನೆಗೆ ಪ್ರೇರೇಪಿಸಬೇಕು ಎಂದ ಅವರು ಯುವಶಕ್ತಿಯ ನಿರ್ಮಾಣಕ್ಕೆ ಉಪನ್ಯಾಸಕರು ಶಕ್ತಿಯುತ ಶಿಕ್ಷಣ ವಿಧಾನ ಅಳವಡಿಸಿಕೊಂಡು ಅವರ ವ್ಯಕ್ತಿತ್ವ ನಿರ್ಮಾಣಕ್ಕೆ ಶ್ರಮಿಸಬೇಕು. ಇಂದಿನ ಆಧುನಿಕ ಭಾರತದ ಬೋಧನಾಶೈಲಿ ಬದಲಾಗಿದ್ದು ಈಗ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಸ್ನೇಹಮಯವಾದ ವಾತಾವರಣ ಕಲ್ಪಿಸಿ ತಮ್ಮ ಆಸಕ್ತಿ ಹಾಗೂ ತಂತ್ರಜ್ಞಾನ ಸಹಿತವಾದ ಹೊಸ ಕಲಿಕಾ ವಿಧಾನಗಳನ್ನು ಕಲಿಸುವ ಕಾರ್ಯ ಆದರ್ಶವಾಗಿ ನಿಲ್ಲಬೇಕು ಎಂದರು.
ಸ್ಥಳೀಯ ಸಂಪನ್ಮೂಲ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕತೆ ಮೈಗೂಡಿಸಿಕೊಂಡು ಜಾಗತಿಕ ಮಟ್ಟದಲ್ಲಿ ಬೆಳೆಯುವಂತೆ ಪೆÇ್ರೀತ್ಸಾಹ ನೀಡಬೇಕು. ತಮ್ಮ ಕೈಯಲ್ಲಿರುವ ತಂತ್ರಜ್ಞಾನ ಹೊಂದಿದ ಮೊಬೈಲ್‍ಗಳನ್ನು ಕೇವಲ ಮನರಂಜನೆಗಾಗಿ ಬಳಸದೆ ಎಜುಟೈನ್ಮೆಂಟ್‍ಗೋಸ್ಕರ ಬಳಸಿ ಜಾಗತಿಕ ಮಟ್ಟದಲ್ಲಿ ಬೆಳೆದು ಭಾರತಕ್ಕೆ ಹಾಗೂ ವಿಶ್ವವಿದ್ಯಾಲಯಗಳಿಗೆ ಕೀರ್ತಿ ತರಬೇಕು ಎಂದು ಮಾರ್ಮಿಕವಾಗಿ ಹೇಳಿದರು.
(ಆರ್‍ಜಿಯುಹೆಚ್‍ಎಸ್) ಮತ್ತು ಕೆಬಿಎನ್ ವಿಶ್ವವಿದ್ಯಾಲಯದ ಗೌರವ ಪ್ರಾಧ್ಯಾಪಕ ಡಾ. ಪಿ.ಎಸ್. ಶಂಕರ್ ಮಾತನಾಡಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಹೆಚ್ಚು ಮಹತ್ವವಿದೆ. ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ ಮೂಲಕ ಹಲವಾರು ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಸಾಧ್ಯವಾಗುತ್ತದೆ. ಬೋಧನಾ ಮತ್ತು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣದಿಂದ ಅಗಾಧ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದರಿಂದ ಇಂದಿನ ಅಗತ್ಯತೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಾಸ್ತವಿಕವಾಗಿ ಮಾತನಾಡಿ ಇಂದಿನ ಜಾಗತಿಕ ಸವಾಲುಗಳನ್ನು ಸ್ವೀಕರಿಸಲು ಅಗತ್ಯವಿರುವ ಹೊಸ ಆಲೋಚನೆ ಜೊತೆಗೆ ಅಂತರ್ ಮತ್ತು ಬಹುಶಿಸ್ತೀಯ ವಿಷಯಗಳ ಚಿಂತನೆ ಮಾಡಬೇಕಿದೆ. ವಿನೂತನ ಕೌಶಲ್ಯ ಮತ್ತು ವೃತ್ತಿ ಜ್ಞಾನ ಗಳಿಸುವುದು ಮತ್ತು ವಿದ್ಯಾರ್ಥಿಗಳಿಗೆ ಕಲಿಸುವುದು ಇಂದಿನ ಶಿಕ್ಷಣ ವ್ಯವಸ್ಥೆಗೆ ಅಳವಡಿಸಿಕೊಂಡು ಬೋಧಕರು ಮುಂದೆ ಸಾಗಬೇಕಿದೆ.
ಡಾ. ಪಿ.ಎಸ್. ಶಂಕರ್ ಪ್ರತಿμÁ್ಠನದ ಅಧ್ಯಕ್ಷೆ ಶ್ರೀಮತಿ. ಅಂಬಿಕಾ ಶಂಕರ್, ಕಲಬುರಗಿ ಉನ್ನತ ಶಿಕ್ಷಣ ಸಂಸ್ಥೆ ಜಂಟಿ ನಿರ್ದೇಶಕ ಪೆÇ್ರ. ಪ್ರಕಾಶ ಹೊಸಮನಿ, ಗುಲಬರ್ಗಾ ವಿಶ್ವವಿದ್ಯಾಲಯದ ಐಕ್ಯೂಎಸಿ ನಿರ್ದೇಶಕ ಪೆÇ್ರ. ಬಿ.ಆರ್. ಕೆರೂರ್, ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥ ಹಾಗೂ ಕಾರ್ಯಕ್ರಮ ಸಂಯೋಜಕ ಪೆÇ್ರ. ಎನ್. ಬಿ. ನಡುವಿನಮನಿ ಉಪಸ್ಥಿತರಿದ್ದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ. ಶರಣಪ್ಪ ಸ್ವಾಗತಿಸಿದರು. ಸಂಗೀತ ವಿಭಾಗದ ಸಿದ್ದಾರ್ಥ ಚಿಲ್ಮಯಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ. ಪಿ.ಎಸ್. ಶಂಕರ್ ಪ್ರತಿμÁ್ಠನದ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಸಂಚಾಲಕ ನರೇಂದ್ರ ಬಡಶೇಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿವಿ ಅಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಸ್ನಾಕತೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ವಿವಿಧ ಪದವಿ ಕಾಲೇಜುಗಳ ಬೋಧಕ ಸಿಬ್ಬಂದಿ ಭಾಗವಹಿಸಿದ್ದರು.

ಗುಣಮಟ್ಟದ ಶಿಕ್ಷಣ ಮತ್ತು ತಂತ್ರಜ್ಞಾನದಿಂದ ಮಾತ್ರ ಬಡತನ ಮತ್ತು ಹಸಿವನ್ನು ನೀಗಿಸಲು ಸಾಧ್ಯವಿದೆ. 1960ರಲ್ಲಿ ಆಹಾರ ಭದ್ರತೆ ಮತ್ತು ಬಿಕ್ಕಟ್ಟನ್ನು ಎದುರಿಸಿದ ಪರಿಣಾಮ ಇಂದಿಗೂ ಅದರ ಸಮಸ್ಯೆಯಿಲ್ಲ. ಮುಂದಿನ ದಿನಗಳಲ್ಲಿ ಎದುರಾಗುವು ಸವಾಲುಗಳನ್ನು ಮೆಟ್ಟಿ ನಿಲ್ಲಲು ಯುವಕರಿಗೆ ತಂತ್ರಜ್ಞಾನದ ಬಳಕೆ, ಉದ್ಯೋಗ ಕೌಶಲ್ಯ, ವೃತ್ತಿಪರತೆ ಜ್ಞಾನ ಒದಗಿಸಿ ಉದ್ಯೋಗ ಭದ್ರತೆ ಸಿಗುವ ರೀತಿ ವಿದ್ಯಾರ್ಥಿಗಳನ್ನು ಶಿಕ್ಷಕರು ತಯಾರಿಗೊಳಿಸಬೇಕು. ಪ್ರಸ್ತುತ ಶಿಕ್ಷಣದ ಅನಿವಾರ್ಯತೆ ಮತ್ತು ಉದ್ಯೋಗ ಸವಾಲುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಅಗತ್ಯವಿದೆ. ಮಾನವ ಸಂಪನ್ಮೂಲದ ಕೊರತೆ ಹಾಗೂ ಸಾಂಸ್ಥಿಕ ಶಿಕ್ಷಣದ ಪೂರ್ವ ಯೋಜನೆ ತಯಾರಿ ಇಲ್ಲದಿದ್ದರೆ ಗುಣಮಟ್ಟದ ಶಿಕ್ಷಣ ನೀಡುವುದು ಸಾಧ್ಯವಾಗುವುದಿಲ್ಲ. ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ 80% ಪ್ರತಿಶತ ವಿದ್ಯಾರ್ಥಿಗಳು ಅರ್ಧಕ್ಕೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ. 60% ವಿದ್ಯಾರ್ಥಿಗಳು ಹಣಕಾಸಿನ ಸಮಸ್ಯೆಯಿಂದ ಕಲಿಕೆಯನ್ನು ಮೊಟಕುಗೊಳಿಸುತ್ತಿದ್ದಾರೆ. ಹದಿನಾಲ್ಕು ಪ್ರದೇಶದ ವಿದ್ಯಾರ್ಥಿಗಳು ಮದುವೆ ಕಾರಣಗಳಿಗಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ. ಭಾರತದ ಯುವಕರ ದೌರ್ಬಲ್ಯವೆಂದರೆ ಅವರಿಗೆ ದೂರದೃಷ್ಟಿ ಹಾಗೂ ಛಲ, ಗುರಿ ಇಲ್ಲದಿರುವುದು. ಭಾರತದ ನಿಜವಾದ ಶಕ್ತಿಯೇ ಯುವಶಕ್ತಿ. ಶಕ್ತಿಯುತ ಭಾರತ ನಿರ್ಮಾಣಕ್ಕೆ ಯುವಕರ ಶಕ್ತಿ ಬೇಕಾಗಿದೆ. ಅದಕ್ಕೆ ಪೂರಕ ಶಿಕ್ಷಣದ ಅನಿವಾರ್ಯತೆಯಿದೆ.
ಪ್ರೊ. ಎಸ್. ಆರ್. ನಿರಂಜನ
ಉಪಾಧ್ಯಕ್ಷರು
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಬೆಂಗಳೂರು.