ಡಿಜಿಟಲ್ ಕ್ರಾಂತಿ ದೇಶದ ಪ್ರಗತಿ

Pm modi addering the bts 2020 through video conference yudiurappa inguratted the bangalore tech summit aswathnarayan jades shatter raizwan harasd and others are seen

ಬೆಂಗಳೂರು, ನ. ೧೯- ಡಿಜಿಟಲ್ ಇಂಡಿಯಾ ಜೀವನದ ಅವಿಭಾಜ್ಯ ಅಂಗವಾಗಿದೆ. ಈಗ ಡಿಜಿಟಲ್ ಇಂಡಿಯಾ ದೇಶದ ಜನರ ಜೀವನ ಶೈಲಿಯಾಗಿದ್ದು, ಡಿಜಿಟಲ್ ಇಂಡಿಯಾದಿಂದಜನರ ಬದುಕು ಬದಲಾಗಿದೆ. ದೇಶ ಡಿಜಿಟಲ್ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದಿನಿಂದ ಏರ್ಪಡಿಸಿರುವ ಮೂರುದಿನಗಳ ಬೆಂಗಳೂರು ತಂತ್ರಜ್ಞಾನ ಮೇಳವನ್ನು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಅವರು, ಐದು ವರ್ಷಗಳ ಹಿಂದೆ ನಾವು ಡಿಜಿಟಲ್ ಇಂಡಿಯಾ ಪರಿಚಯಿಸಿದೆವು. ಈಗ ಡಿಜಿಟಲ್ ಇಂಡಿಯಾ ಜನರ ಜೀವನ ಶೈಲಿಯಾಗಿ ಜನ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ತಾಂತ್ರಕ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿ ತಂತ್ರಜ್ಞಾನಕ್ಕೆ ಆದ್ಯತೆ ನೀಡಿದೆ ಎಂದರು.
ಜಾಗತಿಕ ವೈವಿಧ್ಯತೆ ಈಗ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಪ್ರತಿ ಕ್ಷೇತ್ರದಲ್ಲೂ ತಂತ್ರಜ್ಷಾನದ ಬಳಕೆ ಅನಿವಾರ್ಯವಾಗಿದೆ. ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಕಾರ್ಯಗಳು ಹೀಗೆ ಎಲ್ಲದರಲ್ಲೂ ತಂತ್ರಜ್ಷಾನ ಪ್ರಮುಖ ಪಾತ್ರ ವಹಿಸುತ್ತಿದೆ. ತಂತ್ರಜ್ಞಾನವು ಜನರ ಜೀವನವನ್ನು ಬದಲಿಸಿದೆ. ನಾವು ದೇಶದ ಪ್ರತಿ ಮನೆಗಳಿಗೆ ವಿದ್ಯುತ್ ಒದಗಿಸಿದ್ದೇವೆ. ಇದಕ್ಕೆ ತಂತ್ರಜ್ಞಾನ ಕಾರಣ ಎಂದರು.
ಈಗ ಎಲ್ಲವೂ ಟೆಕ್ ಅಭಿವೃದ್ಧಿಯಾಗಿದೆ. ಎಲ್ಲ ರೀತಿಯ ಸಮಸ್ಯೆಗಳಿಗೂ ಪರಿಹಾರ ದೊರಕುತ್ತಿದೆ. ಭಾರತ ಡೇಟಾ ವಲಯದಲ್ಲಿ ದೊಡ್ಡ ಶಕ್ತಿಯಾಗುತ್ತಿದೆ. ಸರ್ಕಾರಕ್ಕೆ ಡೇಟಾ ಅನಾಲಿಸಿಸ್ ಮಾಡುವ ತಾಖತ್ತು ಇದೆ ಎಂದರು.
ಭಾರತಕ್ಕೆ ೨೫ ವರ್ಷಗಳ ಹಿಂದೆ ಇಂಟರ್‌ನೆಟ್ ಬಂತು. ಆದರೆ, ಇಂಟರ್‌ನೆಟ್ ಚಂದಾದಾರರಲ್ಲಿ ಅರ್ಧದಷ್ಟು ಜನ ೪ ವರ್ಷಗಳ ಹಿಂದೆ ಸೇರ್ಪಡೆಯಾಗಿದ್ದಾರೆ ಎಂದರು.
ಕೋವಿಡ್ ಕಾಲದಲ್ಲಿ ತಾಂತ್ರಿಕತೆಯೇ ಆಡಳಿತ ನಡೆಸಿದೆ. ನಮ್ಮ ಸರ್ಕಾರ ತಂತ್ರಜ್ಞಾನಕ್ಕೆ ಆಧ್ಯತೆ ಕೊಟ್ಟಿದೆ ಎಂದರು. ಬಡವರಿಗೆ ತಾಂತ್ರಿಕ ವಲಯಕ್ಕೆ ಪ್ರವೇಶ ಇರಲಿಲ್ಲ. ಆದರೆ, ಈಗ ಬಡವರು ಕೂಡ ತಂತ್ರಜ್ಷಾನದ ಭಾಗವೇ ಆಗಿದ್ದಾರೆ. ಆಡಳಿತ, ಬದುಕು, ಅಭಿವೃದ್ಧಿ ಹೀಗೆ ಎಲ್ಲದರಲ್ಲೂ ತಂತ್ರಜ್ಷಾನ ಮಹತ್ತರ ಪಾತ್ರ ವಹಿಸಿದೆ ಎಂದರು.
ತಂತ್ರಜ್ಞಾನ ಎನ್ನುವುದು ಜನರ ಮೂಲಮಂತ್ರ ಆಗಿರಲಿದೆ.ದೇಶದ ರಕ್ಷಣಾ ವ್ಯವಸ್ಥೆಯನ್ನೇ ತಂತ್ರಜಾನ ಪುನರ್ ರೂಪಿಸಿದೆ ಎಂದರು. ಡಿಜಿಟಲ್ ಪೇಮೆಂಟ್ ಟೆಕ್ನಾಲಜಿ ಕ್ಷೇತ್ರದಲ್ಲಿ ಆದ ಕ್ರಾಂತಿ ೨ ಬಿಲಿಯನ್ ವ್ಯವಹಾರಗಳು ಡಿಜಿಟಲ್ ಪೇಮೆಂಟ್ ಕ್ಷೇತ್ರದಲ್ಲಿ ಆಗಿದೆ ಎಂದರು.
ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಈ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದರೆ ಭಾರತ ಬ್ರಹ್ಮಾಂಡವಾಗಿ ಹೊರ ಹೊಮ್ಮಲಿದೆ ಎಂದರು.
ಮುಂದಿನ ದಿನಗಳಲ್ಲಿ ತಂತ್ರಜ್ಷಾನವನ್ನೆ ಎಲ್ಲವೂ ಆಧರಿಸಿಕೊಂಡಿರಲಿದೆ. ತಂತ್ರಜ್ಞಾನ ತನ್ನದೇ ಆದ ಸಾಂಸ್ಕೃತಿಕತೆಯನ್ನು ಒಳಗೊಂಡಿದೆ.ಕೃಷಿಕ ವಲಯವು ತಂತ್ರಜ್ಞಾನದಿಂದ ತಾಂತ್ರಿಕತೆಯಿಂದ ಅಭಿವೃದ್ಧಿ ಹೊಂದಿದೆ ಎಂದರು.
ದೇಶದ ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಆಯುಷ್ಮಾನ್ ಭಾರತ್ ತಾಂತ್ರಿಕ ಅಭಿವೃದ್ಧಿಯ ಕೂಸು,ತಂತ್ರಜ್ಞಾನ ಆಧರಿಸಿ ಈ ಯೋಜನೆಯನ್ನು ರೂಪಿಸಲಾಗಿದೆ. ಆಯುಷ್ಮಾನ್ ಭಾರತ್ ಸಂಪೂರ್ಣ ತಾಂತ್ರಿಕತೆಯನ್ನು ಬಳಸಿಕೊಂಡ ಜನಪರ ಯೋಜನೆಯಾಗಿದೆ ಎಂದರು.
ಸಂಕಷ್ಟ ಸಮಯದಲ್ಲಿ ಪ್ರತಿಭೆಯನ್ನು ಹೊರ ಹಾಕುವುದು ಬಹಳ ಕಷ್ಟದ ವಿಚಾರ.ಆದರೆ, ಭಾರತ ಅದನ್ನು ಸಾಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಕೊರೊನಾ ಕಾಲದಲ್ಲಿ ನಾವು ನೋಡಿದ್ದು ರಸ್ತೆಯ ತಿರುವು ಮಾತ್ರ ಆದರೆ ಅದೇ ಕೊನೆಯಲ್ಲ. ಮಾಹಿತಿ ತಂತ್ರಜ್ಞಾನದ ಕಾಲಘಟ್ಟದಲ್ಲಿದ್ದೇವೆ.ಮುಂದೆ ಹೋಗುವ ಅಗತ್ಯವಿದೆ ಎಂದರು.
ಡಿಜಿಟಲ್ ಇಂಡಿಯಾ ಅಭಿಯಾನದಿಂದ ದೇಶ ಅಭಿವೃದ್ಧಿಯತ್ತ ಸಾಗಿದೆ ಜನರ ಜೀವನವು ಸುಧಾರಿಸುತ್ತಿದೆ. ಡಿಜಿಟಲ್ ಇಂಡಿಯಾ ಎಂಬುದು ಜನರ ಜೀವನ ಪದ್ಧತಿಯಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.
ತಂತ್ರಜ್ಞಾನ ನಮ್ಮ ಎಲ್ಲ ಯೋಜನೆಗಳ ಅವಿಭಾಜ್ಯ ಅಂಗವಾಗಿದೆ. ಆಡಳಿತ ವ್ಯವಸ್ಥೆಯ ಭಾಗವಾಗಿ ಪರಿವರ್ತನೆಯಾಗಿದೆ. ತಂತ್ರಜ್ಞಾನ ಎಂಬುದು ಎಲ್ಲರ ಬದುಕಿನ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ಭಾರತದಲ್ಲಿ ಆರೋಗ್ಯ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳು ಜಾರಿಗೆ ಬರಲು ತಂತ್ರಜ್ಞಾನದ ಅಪಾರವಾಗಿದೆ. ತಂತ್ರಜ್ಞಾನದ ಸಹಕಾರದಿಂದಲೇ ಆರೋಗ್ಯ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪುವಂತಾಗಿದೆ. ಕೋರೋಣ ಮಹಾಮಾರಿಯ ಸಮಯದಲ್ಲಿ ತಂತ್ರಜ್ಞಾನ ಜನರ ಆರೋಗ್ಯ ರಕ್ಷಣೆಗೆ ಸಾಕಷ್ಟು ಪ್ರಮಾಣದಲ್ಲಿ ಸಹಕಾರಿಯಾಗಿದೆ ಎಂದರು.
ಸಂಶೋಧನಾ ಕ್ಷೇತ್ರದಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಂಡು ಹೊಸ ಹೊಸ ಸಂಶೋಧನೆ ಗಳನ್ನು ಮಾಡುತ್ತಿರುವುದರಿಂದ ತಂತ್ರಜ್ಞಾನ ಕ್ಷೇತ್ರ ಮತ್ತಷ್ಟು ಬೆಳವಣಿಗೆಯಾಗುತ್ತಿದೆ. ತಂತ್ರಜ್ಞಾನದಿಂದಲೂ ಯೋಜನೆಗಳ ಲಾಭ ಜನಸಾಮಾನ್ಯರಿಗೆ ತಲುಪುವಂತಾಗಿದೆ ಎಂದು ಅವರು ತಿಳಿಸಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ, ಸಚಿವರಾದ ಜಗದೀಶ್ ಶೆಟ್ಟರ್, ಕೆ.ಸಿ ನಾರಾಯಣಗೌಡ,ಮುಖ್ಯಕಾರ್ಯದರ್ಶಿ. ಟಿ.ಎಂ ವಿಜಯಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಪಾಟ್ ಮಾರಿಸನ್, ಸ್ವಿಜ್ಜಿ ಗಣರಾಜ್ಯದ ಉಪಾಧ್ಯಕ್ಷ ಪರ್ಮಾಲಿಂಕ್ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಆನ್‌ಲೈನ್‌ನಲ್ಲೆ ತಂತ್ರಜ್ಞಾನ ಮೇಳದ ಬಗ್ಗೆ ಮಾತನಾಡಿದರು.