ಡಿಜಿಟಲ್ ಕಲಿಕೆಗೆ ಭಾರತ ಸನ್ನದ್ದ-ಡಾ. ತಡಸದ

ಧಾರವಾಡ ಜ.14-ಕೋವಿಡ್-19 ರ ಸಂಕಷ್ಟದ ಪರಿಸ್ಥಿತಿಯಲ್ಲಿ, ಭಾರತದ ಉನ್ನತ ಶಿಕ್ಷಣ ಕ್ಷೇತ್ರ ಡಿಜಿಟಲ್ ಸಂಪನ್ಮೂಲಗಳನ್ನು ಶೈಕ್ಷಣಿಕ ಹಾಗೂ ಸಂಶೋಧನೆಗೆ ಸರಿಯಾದ ಪ್ರಮಾಣದಲ್ಲಿ ಬಳಸಿಕೊಳ್ಳಲು ಸನ್ನದ್ಧವಾಗಿದೆ ಎಂದು ಕುಲಸಚಿವರು (ಮೌಲ್ಯಮಾಪನ), ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ, ವಿಜಯಪುರ, ಪ್ರೊ. ಪಿ. ಜಿ. ತಡಸದ ಅಭಿಪ್ರಾಯಪಟ್ಟರು.
ಕೃಷಿ ವಿಶ್ವವಿದ್ಯಾಲಯದ ಅರಣ್ಯ ಮಹಾವಿದ್ಯಾಲಯ, ಶಿರಸಿಯ ಗ್ರಂಥಾಲಯವು ವಿಶ್ವವಿದ್ಯಾಲಯದ ವಿಶ್ವ ಬ್ಯಾಂಕ್ ನೆರವಿನ ಸಾಂಸ್ಥಿಕ ಅಭಿವೃದ್ಧಿಯೋಜನೆಯಡಿ ಇತ್ತೀಚೆಗೆ ಡಿಜಿಟಲ್ ಸಂಪನ್ಮೂಲಗಳ ಉಪಯುಕ್ತತೆ ಕುರಿತು ಹಮ್ಮಿಕೊಂಡಿದ್ದ ಆನ್‍ಲೈನ ಕಾರ್ಯಗಾರದಲ್ಲಿ ಮಾತನಾಡಿದರು. ಡಿಜಿಟಲ್ ಮಾಹಿತಿಗೆ ಹೆಚ್ಚಿನ ಬೇಡಿಕೆ ಇದ್ದು ಗ್ರಂಥಪಾಲಕರು, ಆಡಳಿತಾಧಿಕಾರಿಗಳು, ನೀತಿ ನಿರೂಪಕರು ಸಮರ್ಪಕ ಯೋಜನೆಗಳನ್ನು ರೂಪಿಸಬೇಕು ಹಾಗೂ ಡಿಜಿಟಲ್ ಸಂಪನ್ಮೂಲ ಬಳಕೆ ಕುರಿತು ಅರಿವು ಮೂಡಿಸಬೇಕೆಂದು ಕಳಕಳಿ ವ್ಯಕ್ತಪಡಿಸಿದರು.
ಕೃವಿವಿ ಕುಲತಿಗಳಾದ ಡಾ. ಮಹಾದೇವ. ಬಿ. ಚೆಟ್ಟಿ, ಕಾರ್ಯಕ್ರಮ ಉದ್ಘಾಟಿಸಿ, ತಂತ್ರಜ್ಞಾನದ ಬಳಕೆ ಉನ್ನತ ಶಿಕ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು ಇಂತಹ ರ್ಕಾಕ್ರಮಗಳು ಡಿಜಿಟಲ್ ಸಂಪನ್ಮೂಲಗಳ ಬಳಕೆಯನ್ನು ಹೆಚ್ಚಿಸುತ್ತದೆ ಎಂದರು. ಇನ್‍ಫರ್ಮಾಟಿಕ್ಸ, ಬೆಂಗಳೂರು, ಡಾ. ರವಿಶಂಕರಡಿಜಿಟಲ್ ಸಂಪನ್ಮೂಲಗಳ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ವಿದ್ಯಾಧಿಕಾರಿ (ಅರಣ್ಯ) ಡಾ. ಏಚ್. ಶಿವಣ್ಣ ಡಾ. ಪಿ. ಯು. ಕೃಷ್ಣರಾಜ, ಡಾ. ಏಚ್. ಬಬಲಾದ, ಡಾ. ಆಶಾಲತಾ, ಡಾ. ವಾಸುದೇವ, ಮತ್ತಿತರು ಉಪಸ್ಥಿತರಿದ್ದರು. ಡಾ. ದೀಪ್ತಿ ನಿರೂಪಿಸಿದರು.