ಡಿಗ್ರಿ ಕಾಲೇಜು ಆರಂಭ

. ಆರೋಗ್ಯ ಇಲಾಖೆ ನಿಯಮ ಪಾಲನೆ
. ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯ
. ತರಗತಿ ಕೊಠಡಿ ಸಂಪೂರ್ಣ ಸ್ಯಾನಿಟೈಸ್

ಗಂಗಾವತಿ ನ 17 : ಕೋವಿಡ್ 19- ಸಂಕಷ್ಟದ ನಡುವೆಯೂ ಗಂಗಾವತಿ ತಾಲೂಕಿನಲ್ಲಿ ಡಿಗ್ರಿ ಕಾಲೇಜುಗಳು ಮಂಗಳವಾರ ಆರಂಭವಾಗಿವೆ.
ಹೌದು, ಸುಮಾರು 8 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಡಿಗ್ರಿ ಕಾಲೇಜು ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಸಂತಸ ಉಂಟು ಮಾಡಿದೆ.
ಯುಜಿಸಿ ಹಾಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಸಿದ್ದತೆ ಮಾಡಿಕೊಳ್ಳಲಾಗಿತ್ತು.
ತಾಲೂಕಿನಲ್ಲಿ ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ನಾಲ್ಕು ಖಾಸಗಿ ಡಿಗ್ರಿ ಕಾಲೇಜುಗಳಿವೆ.
ಸರ್ಕಾರದ ಕೋವಿಡ್ -19 ನಿಯಮದಡಿ ಹಾಗೂ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮ ಮತ್ತು ಯುಜಿಸಿ ನಿಯಮ ಪಾಲನೆ ಮಾಡುತ್ತಿರುವ ಕಾಲೇಜಿನ ಪ್ರಾರ್ಚಾಯರು, ಈಗಾಗಲೇ ಸ್ವಚ್ಛತೆ, ಸಾಮಾಜಿಕ ಅಂತರ, ಮಾಸ್ಕ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೇ ಕಾಲೇಜು ಮುಂಭಾಗದಲ್ಲಿ ಆರೋಗ್ಯ ಸಹಾಯ ವಾಣಿ ಕೇಂದ್ರ ವ್ಯವಸ್ಥೆ ಮಾಡಿದ್ದು,
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದ ಆರೋಗ್ಯ ತಪಾಸಣೆ ಕಡ್ಡಾಯ ಮಾಡಲಾಗುತ್ತದೆ.
ಪ್ರತಿ ತರಗತಿಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಒಂದು ಕೊಠಡಿಯಲ್ಲಿ 30 ವಿದ್ಯಾರ್ಥಿಗಳು ಕನಿಷ್ಠ ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದೆ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳನ್ನು ಸ್ವಚ್ಚತೆ ಮಾಡಲಾಗಿದೆ.


ಆರೋಗ್ಯ ಇಲಾಖೆಯ ಹಾಗೂ ಯುಜಿಸಿ ನಿಯಮ ದಂತೆ ಡಿಗ್ರಿ ಕಾಲೇಜು ಆರಂಭಿಸುತ್ತದೆ. ಅಲ್ಲದೇ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಕಡ್ಡಾಯ ಮಾಡಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಕಾಲೇಜುಗೆ ಬರುವಂತೆ ಮಾಹಿತಿ ನೀಡಿದೆ. ಎಲ್ಲ ತರಗತಿಗಳನ್ನು ಸ್ವಚ್ಛತೆ ಮಾಡಲಾಗಿದೆ. ಮಂಗಳವಾರ ಸಭೆ ಕರೆದಿದ್ದು, ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದಂತೆ ಕಾಲೇಜುಗಳು ನಡೆಯಲಿವೆ.

  • ಬಸಪ್ಪ, ಸಿರಿಗೇರಿ, ಪಾರ್ಚಾಯರು,ಸಂಕಲ್ಪ ಡಿಗ್ರಿ ಗಂಗಾವತಿ,


ಕಳೆದ ಎರಡು ದಿನದಿಂದ ಕಾಲೇಜು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. 15 ಜನದ ವಿಶೇಷ ತಂಡ ರಚನೆ ಮಾಡಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಕಾಲೇಜುಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು. ಇದು ಸರ್ಕಾರದ ನಿಯಮ.

  • ಡಾ.ಹೆಬಸೂರು, ಪ್ರಾಚಾರ್ಯ, ಎಸ್.ಕೆ.ಎನ್‌.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ