ಡಿಗ್ಗಿ: ಗುರು ಮಡಿವಾಳೇಶ್ವರ ಅಡ್ಡಪಲ್ಲಕ್ಕಿ ಮಹೋತ್ಸವ

ಕಮಲನಗರ:ಸೆ.8: ತಾಲ್ಲೂಕಿನ ಡಿಗ್ಗಿ ಗ್ರಾಮದ ಶ್ರೀ ಗುರು ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಮಡಿವಾಳೇಶ್ವರ ಪಲ್ಲಕ್ಕಿ ಮಹೋತ್ಸವ ನೂರಾರು ಭಕ್ತರ ಮಧ್ಯದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.

ಸೆ.4 ರಿಂದ ಆರಂಭಗೊಂಡ ಶ್ರೀ ಗುರು ಮಡಿವಾಳೇಶ್ವರ ಜಾತ್ರಾ ಮಹೋತ್ಸವದ ಪ್ರಮುಖ ಘಟ್ಟವಾದ ಮಂಗಳವಾರ ಮಡಿವಾಳೇಶ್ವರ ಅಡ್ಡಪಲ್ಲಕ್ಕಿ ಮಹೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.

ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳವರೆಗೆ ನಡೆದ ಭಜನೆ ಸಾಂಸ್ಕøತಿಕ ಚಟುವಟಿಕೆ ಕಾರ್ಯಕ್ರಮ ಮಹಾಮಂಗಲಗೊಂಡಿತ್ತು.

ಅರ್ಚಕ ಚಂದ್ರಕಾಂತ ಹಿರೇಮಠ ಮತ್ತು ಶಿವಕುಮಾರ ಹಿರೇಮಠ ತಿಂಗಳ ಪರ್ಯಂತ ಶ್ರೀ ಮಡಿವಾಳೇಶ್ವರ ಭಜನೆ ಕಾರ್ಯಕ್ರಮ ನಡೆಸಿಕೊಂಡು ಬಂದರು.

ಯುವರಾಜ ಚ್ಯಾಂಡೇಶ್ವರೆ, ನಾಗಯ್ಯ ಸ್ವಾಮಿ, ಸುಭಾಷ ಪಾಟೀಲ, ಮಚ್ಚೀಂದ್ರ ಮಾಣಿಕರಾವ ಜಾಧವ, ನೀಲಮ್ಮ, ಮಲ್ಲಮ್ಮ, ಪಾರಮ್ಮ ಅವರು ಸಂಗೀತ ಸೇವೆಯನ್ನು ಸಲ್ಲಿಸಿದರು.

ಮೂರು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ಕೊನೆ ದಿನ ಅಡ್ಡ ಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ಮಹಿಳೆಯರು, ಯುವಕರು ಹಾಗೂ ಮಕ್ಕಳು ಭಜನೆ ಹಾಡು ಪದಗಳಿಗೆ ಕುಣಿದು ಕುಪ್ಪಳಿಸಿದರು.

ಟ್ರಸ್ಟ್‍ನ ಅಧ್ಯಕ್ಷ ದೇವೇಂದ್ರ ಪಾಟೀಲ, ಉಪಾಧ್ಯಕ್ಷ ಕಾಶಿನಾಥ ಪಾಟೀಲ, ಕಾರ್ಯದರ್ಶಿ ಮಡೋಳಪ್ಪ ಮುರ್ಕೆ, ಬಾಬುರಾವ ಹರಪಾಳೆ, ಸೂರ್ಯಕಾಂತ ಬಿರಾದಾರ, ಶಿವಕುಮಾರ ರಾಂಪುರೆ, ವಿಜಯಕುಮಾರ ಪಾಟೀಲ, ಸೋಮನಾಥ ರಾಂಪುರೆ, ಗಿರಿರಾಜ ಶ್ರೀಗಿರೆ, ಸಂಗಮನಾಥ ಬಿರಾದಾರ, ವೈಜನಾಥ ಕುಂಬಾರಗಿರೆ, ಮೇಲ್ವಿಚಾರಕ ಮನೋಜಕುಮಾರ ಸ್ವಾಮಿಗಳು ಪಾಲ್ಗೊಂಡಿದ್ದರು.

ಸೆ.5 ರಂದು ಮಡಿವಾಳೇಶ್ವರ ಶಿವಲಿಂಗ ಗದ್ದುಗೆಗೆ ಅಭಿಷೇಕ ಮಹಾ ಮಂಗಳಾರತಿ ಮತ್ತು ಮರುದಿನ ಅನ್ನದಾಸೋಹ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.