ಡಿಕೆಶಿ ಹೆಲಿಕಾಪ್ಟರ್‌ಗೆ ಬಡಿದ ರಣಹದ್ದು

ತುರ್ತು ಭೂಸ್ಪರ್ಶ

ಬೆಂಗಳೂರು,ಮೇ.೨-ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಮುಳಬಾಗಿಲು ಕ್ಷೇತ್ರಕ್ಕೆ ತೆರಳುತ್ತಿದ್ದ ವೇಳೆ ಅವರ ಹೆಲಿಕಾಪ್ಟರ್ ಮುಂಭಾಗದ ಗಾಜಿಗೆ ರಣಹದ್ದು ಬಡಿದು ಗಾಜು ಪುಡಿ ಪುಡಿಯಾದ ಘಟನೆ ಹೊಸ ಕೋಟೆ ಬಳಿ ಇಂದು ನಡೆದಿದೆ.
ರಣಹದ್ದು ಹೆಲಿಕಾಪ್ಟರ್ ಮುಂಭಾಗದ ಗಾಜಿಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಗಾಜು ಪುಡಿ ಪುಡಿಯಾಗಿದೆ. ಅದೃಷ್ಟವಶಾತ್ ಹೆಲಿಕಾಪ್ಟರ್‌ನಲ್ಲಿದ್ದ ಡಿಕೆಶಿ ಸೇರಿದಂತೆ ಇತರರಿಗೆ ಯಾವುದೇ ಆಪಾಯವಾಗದೇ ಸುರಕ್ಷಿತವಾಗಿದ್ದಾರೆ.
ಈ ಘಟನೆಯಿಂದ ಮುಂದೆ ಪ್ರಯಾಣ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನನ್ನು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಘಟನೆಯಿಂದ ಡಿ.ಕೆ ಶಿವಕುಮಾರ್ ವಿಚಲಿತಗೊಂಡಿದ್ದರು ಎನ್ನಲಾಗಿದ್ದು, ತಕ್ಷಣ ಏರ್ ಪೋರ್ಟ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್‌ನ್ನು ಭೂ ಸ್ಪರ್ಶ ಮಾಡಲಾಗಿದೆ. ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.