ಡಿಕೆಶಿ- ಸಿದ್ದರಾಮಯ್ಯ ಅಪ್ಪುಗೆಗೆ
ಜನ‌ರು ಮರುಳಾಗಲ್ಲ: ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ.4- ನಿನ್ನೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ಮತ್ತು ಅವರು ಒಬ್ಬರನ್ನ ಮತ್ತೊಬ್ಬರು ಅಪ್ಪಿಕೊಳ್ತಾ ಇದ್ರು ಇದಕ್ಕೆ ಜನರು ಮರಳು ಆಗಲ್ಲ. ಅಧಿಕಾರಕ್ಕಾಗಿ ಅಪ್ಪಿಕೊಳ್ಳುವ ಘನಂಧಾರಿ ಕೆಲಸ ಮಾಡಿದ್ದಾರೆಂದು ಸಚಿವ ಶ್ರೀರಾಮುಲು ಟೀಕಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಹುಟ್ಟುಹಬ್ಬ ಆಚರಣೆ ಆಗಿರಲಿಲ್ಲ ಮತ ಸಮರಕ್ಕೆ ಸಜ್ಜಾಗಿದ್ದಾರೆ ಅನ್ನೋ ಸಂದೇಶ ನೀಡಿದ್ದಾರೆ. ನಾನು ದೇವರಲ್ಲಿ ಪ್ರಾರ್ಥನೆ ಮಾಡುವೆ. ಅವರಿಗೆ ಆರೋಗ್ಯ ಆಯಸ್ಸು ಚೆನ್ನಾಗಿ ನೀಡಲಿ ಎಂದರು
ಅವರು ನಿನ್ನೆ ಎದ್ದರಾಮಯ್ಯನವರ ತರಹ‌ ಕಾರ್ಯಕ್ರಮದಲ್ಲಿ ಎಗರಾಡ್ತಾ ಇದ್ರು ಆದರೆ ಮುಂದಿನ ದಿನಗಳಲ್ಲಿ ಬಿದ್ದರಾಮಯ್ಯ ಅಗುತ್ತಾರೆ. ಅವರು ಎಷ್ಟೇ ಜನ ಸೇರಿಸಲಿ ಅದಕ್ಕೆ ನಾವು ಹೆದರಬೇಕಿಲ್ಲ. ಅದಕ್ಕಿಂತಲೂ ಹೆಚ್ಚು ಜನರನ್ನು ನಾವೂ ಸೇರಿಸಬಹುದು ಎಂದರು.‌
ಅಂಪೈರ್ ಔಟ್:
ಡಿಕೆಶಿ ಮತ್ತು ಸಿದ್ದರಾಮಯ್ಯರನ್ನ ಒಂದು ಮಾಡಲು ದೆಹಲಿಯಿಂದ ಅಂಪೈಯರ್ ಬಂದಿದ್ರು. ಆದರೆ ಆ ಅಂಪೈಯರ್ ಗೂ ಸಹ ಯಾರನ್ನ ಇನ್ ಮಾಡಬೇಕು. ಯಾರನ್ನ ಔಟ್‌ ಮಾಡಬೇಕು ಅನ್ನೋದು ತಿಳಿಯಲಿಲ್ಲ.‌ಅದಕ್ಕಾಗಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಹೋಗ್ತೇವಿ ಅಂತಿದ್ದಾರೆ. ಮೇನ್ ಅಂಪೈಯರ್ ಕೂಡಾ ತೀರ್ಪು ನೀಡಲು ಆಗದೆ ಅವರೇ ಔಟ್ ಆಗಿದ್ದಾರೆಂದು ವ್ಯಂಗವಾಡಿದರು.
ಯಾವ ಸಮಾಜವಾದಿ:
ಸಿದ್ದರಾಮಯ್ಯ ಅವರು ಸಮಾಜವಾದಿ ಅಂತಾರೆ. ಸಮಾಜವಾದಿ ತತ್ವಗಳನ್ನ ಮರೆತು ಆಡಂಬರದಿಂದ ಹುಟ್ಟುಹಬ್ಬ ಮಾಡಿಕೊಂಡಿದ್ದಾರೆ ಹೊಸ ಆಚರಣೆಗೆ ಸಿದ್ದರಾಮಯ್ಯ ಮುನ್ನಡಿ ಬರೆದಿದ್ದಾರೆಂದ ಅವರು
ಪಕ್ಷ ತೀರ್ಮಾನ ಮಾಡಿದ್ರೆ ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ಸ್ಪರ್ಧೆ ಮಾಡುವೆ ಎಂದರು.