ಬಳ್ಳಾರಿ ಏ 11 : ಇಂದು ಮಧ್ಯಾಹ್ನ ದೆಹಲಿಯಿಂದ ಬೆಂಗಳೂರಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿ ನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ನಾರಾ ಭರತ್ ರೆಡ್ಡಿ ಮತ್ತು ಆಂಜನೇಯಲು ಅವರನ್ನು ಕರೆಸಿ ಸಂಧಾನ ನಡೆಸಿರುವುದು ಭರತ್ ಗೆ ಟಿಕೆಟ್ ಹಾದಿ ಸುಗಮವಾದಂತಾಗಿದೆನ್ನಲಾಗುತ್ತಿದೆ.
ಇದರಿಂದಾಗಿ ಇವರೆಗೆ ಇದ್ದ ಗೊಂದಲ, ಆತಂಕಗಳಿಗೆ ಒಂದಿಷ್ಡು ತೆರೆ ಎಳೆದಂತಾಗಿದೆ. ಆಂಜನೇಯಲು ಅವರಿಗೆ ಎಂ.ಎಲ್.ಸಿ ಸ್ಥಾನದ ಭರವಶೆ ನೀಡಿದ್ದಾರಂತೆ.
ಅದರೂ ಖರ್ಗೆ ಮತ್ತು ರಾಹುಲ್ ಅವರ ಸೂಚನೆಯಂತೆ ನಿಮ್ಮನ್ನು ಕರೆಸಿ ಮಾತನಾಡಿರುವೆ. ನಿಮ್ಮಿಬ್ಬರಲ್ಲಿ ಯಾರಿಗೇ ಟಿಕೆಟ್ ಬಂದರೂ ಪರಸ್ಪರ ಕೂಡಿ ಚುನಾವಣೆ ಎದುರಿಸಬೇಕು. ಪಕ್ಷೇತರ ಹಾಗೆ ಹೀಗೆ ಎನ್ನಬಾರದು. ಇಂದು ಇಲ್ಲ ನಾಳೆ ಟಿಕೆಟ್ ಘೋಷಣೆ ಮಾಡಲಿದೆಂದು ಹೇಳಿದ್ದಾರಂತೆ.
ಅಲ್ಲದೆ ಈ ಸಂದರ್ಭದಲ್ಲಿ ಭರತ್ ಅವರಿಗೆ ರಾಜ್ಯ ನಾಯಕರನ್ನು ನಿರ್ಲಕ್ಷಿಸಿ ದೆಹಲಿ ನಾಯಕರನ್ನಷ್ಟೇ ಪರಿಗಣಿಸುವುದು ಸರಿಯಲ್ಲ. ಎಲ್ಲರೊಂದಿಗೆ ಬೆರೆತು ಚುನಾವಣೆ ಮಾಡಿ ಎಂದು ಕಿವಿ ಮಾತನ್ನು ಡಿಕೆಶಿ ಹೇಳಿದ್ದಾರಂತೆ.
ಏನಾಗುತ್ತೋ ಕಾದು ನೋಡಬೇಕಿದೆ.