ಡಿಕೆಶಿ ಭೇಟಿ ವಿಚಾರಬೇಕಾದ್ರೆ ರಾಜಕೀಯ ಬಿಡ್ತಿನಿಬಿಜೆಪಿ ಬಿಡಲ್ಲ: ಸೋಮಶೇಖರ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.21: ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನಿನ್ನೆ ದಿನ ಬೆಂಗಳೂರಿನ ಸದಸಶಿವ ನಗರದ ನಿವಾಸದಲ್ಲಿ  ಭೇಟಿ ಮಾಡಿದ್ದು ರಾಜಕೀಯ ವಿಷಯವಾಗಿ ಅಲ್ಲ ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸಂಜೆವಾಣಿ ಜೊತೆ ಮಾತನಾಡಿದ ಅವರು. ನನ್ನ ಸಂಬಂಧಿಯೊಬ್ಬರ ವ್ಯವಹಾರದ ಸಂಬಂಧ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿತ್ತೇ ವಿನಹ, ರಾಜಕೀಯದಿಂದ ಅಲ್ಲ. ನಾನು ಕಾಂಗ್ರೆಸ್ ಪಕ್ಷ ಸೇರುವ ಪ್ರಮೇಯವೇ ಇಲ್ಲ. ಅಲ್ಲಿ ಇರುವವರಿಗೆ ಸೂಕ್ತ ಸ್ಥಾನ ಮಾನಗಳಿಲ್ಲ‌ ನಾನು ಹೋಗಿ ಏನು ಮಾಡಲಿ.  ಬೇಕಾದ್ರೆ ರಾಜಕೀಯದಿಂದ ದೂರ ಉಳಿಯುವೆ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಏನಿದ್ದರೂ ಬಿಜೆಪಿಯಲ್ಲೇ ಇರುವೆ ಎಂದು ಹೇಳಿದ್ದಾರೆ.