ಡಿಕೆಶಿ ಬೃಹತ್ ರ್‍ಯಾಲಿ

ಬೆಂಗಳೂರು ಅ.೩೧-ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮತ್ತಿತರರು ಇಂದು ಬಿರುಸಿನ ಪ್ರಚಾರ ನಡೆಸಿದರು.
ನಗರದ ಗೊರಗುಂಟೆಪಾಳ್ಯ ಹಾಗೂ ಮತ್ತಿತರಕಡೆ ಬೈಕ್ ರ್‍ಯಾಲಿ ನಡೆಸಿ ಮತಯಾಚಿಸಿದರು. ನಗರದ ಹೊರವಲಯದಲ್ಲಿರುವ ಸಿದ್ಧ ಉಡುಪಿ ತಯಾರಿಕಾ ಘಟಕಗಳಿಗೂ ಭೇಟಿ ನೀಡಿ ಕಾರ್ಮಿಕರ ಕಷ್ಟ-ಸುಖ ಆಲಿಸಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಡಿ.ಕೆ. ಶಿವಕುಮಾರ್ ನಡೆಸಿದ ಪ್ರಚಾರ ವೇಳೆ ನೂರಾರು ಕಾರ್ಯಕರ್ತರು ಹಾಜರಿದ್ದು, ಅಭ್ಯರ್ಥಿ ಪರ ಮತಯಾಚಿಸಿದರು.
ಆಯೋಗಕ್ಕೆ ದೂರು
ಈ ಮಧ್ಯೆ ಕಾಂಗ್ರೆಸ್ ನ ಆಯೋಗ ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿಮಾಡಿ ಬಿಜೆಪಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ದೂರು ಸಲ್ಲಿಸಿದರು.
ಶಿರಾದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಮುಖ್ಯಮಂತ್ರೆ ಯಡಿಯೂರಪ್ಪ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಮತದಾರರ ಓಲೈಕೆಗೆ ಪೊಳ್ಳು ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಕಾನೂನು ವಿಭಾಗದ ಮುಖ್ಯಸ್ಥ ಎ.ಎಸ್. ಪೊನ್ನಣ್ಣ ಅವರ ನಿಯೋಗ ಆಯುಕ್ತರನ್ನು ಭೇಟಿಮಾಡಿ ದೂರು ಸಲ್ಲಿಸಿತು.