ಡಿಕೆಶಿ ಗೆ ಕೂಡ್ಲಿಗಿಯಲ್ಲಿ ಅದ್ದೂರಿ ಸ್ವಾಗತ.

ಕೂಡ್ಲಿಗಿ.ನ.22:- ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಹೊಸಪೇಟೆಯಲ್ಲಿ ಜರುಗುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಮಧ್ಯಾಹ್ನ ಬೆಂಗಳೂರಿನಿಂದ ಹೈವೇಯಲ್ಲಿ  ಕೂಡ್ಲಿಗಿ ಮೂಲಕ ಹಾದು ಹೋಗುವ ಸಂಧರ್ಭದಲ್ಲಿ ಕೂಡ್ಲಿಗಿ ಹೊರವಲಯದ ಮಾನಸ ಡಾಬಾ ಹತ್ತಿರದ ರಸ್ತೆಯಲ್ಲಿ ಕೂಡ್ಲಿಗಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾರ ತುರಾಯಿ ಹಾಕುವ ಮೂಲಕ ಅದ್ದೂರಿ ಸ್ವಾಗತ ಕೋರಿದರು.                                                                         ಕಾಂಗ್ರೆಸ್ ನ ಕೂಡ್ಲಿಗಿ ಬ್ಲಾಕ್ ಮಾಜಿ  ಅಧ್ಯಕ್ಷ ಕೋಗಳಿ ಮಂಜುನಾಥ ಡಿಕೆಶಿ ಅವರ ಭಾವಚಿತ್ರದ ಫೋಟೋವನ್ನು ಅವರಿಗೆ  ವಿತರಿಸಿದರು. ಡಿಕೆಶಿ ಜೊತೆ ಮಾಜಿ ಸಚಿವ ಪರಮೇಶ್ವರ್ ನಾಯ್ಕ್, ಬಳ್ಳಾರಿ ಮಾಜಿ ಸಂಸದ ಉಗ್ರಪ್ಪ, ಕೆಪಿಸಿಸಿ ಸದಸ್ಯ ಲೋಕೇಶ್ ವಿ. ನಾಯಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಯೋಗಿ, ಗುಜ್ಜಲ್ ರಘು, ಕಾವಲ್ಲಿ ಶಿವಪ್ಪನಾಯಕ, ನಾಗಮಣಿ,ಶುಕೂರ್ ಹಾಗೂ ಇತರೆ ಕಾಂಗ್ರೆಸ್ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದು  ರಾಜ್ಯಾಧ್ಯಕ್ಷರಾದ ನಂತರ ಇದೇ ಪ್ರಥಮ ಬಾರಿಗೆ ಈ ಭಾಗಕ್ಕೆ ಆಗಮಿಸುವ ಡಿ.ಕೆ.ಶಿವಕುಮಾರ್ ರವರಿಗೆ ಅದ್ದೂರಿ ಸ್ವಾಗತ ಕೋರಿದ್ದರು ನಂತರ ಹೊಸಪೇಟೆಯತ್ತ ಪ್ರಯಾಣ ಬೆಳೆಸಿದರು.