ಡಿಕೆಶಿರಿಂದ ಜೋತಿಷಿಗಳ ಭೇಟಿ

ಕೋಲಾರ,ಮೇ.೨೨: ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಅವರು ಕಳೆದ ರಾತ್ರಿ ಕೋಲಾರದಲ್ಲಿರುವ ಜ್ಯೋತಿಷಿಗಳನ್ನ ಭೇಟಿ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ವೆಲ್ಲಾಲ ಸತ್ಯ ನಾರಾಯಣ ಶಾಸ್ತ್ರಿ ಎಂಬುವರನ್ನ ನಿನ್ನೆ ರಾತ್ರಿ ಭೇಟಿಯಾಗಿ, ಸುಮಾರು ಮೂರು ಗಂಟೆಗಳ ಕಾಲ ಜ್ಯೋತಿಷಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಇದಾದ ನಂತರ ರಾಯಲ್ಪಾಡು ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಇನ್ನು ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಅವರನ್ನ ವೆಲ್ಲಾಲ ಸತ್ಯನಾರಾಯಣ ಶಾಸ್ತ್ರಿಗಳು ಸನ್ಮಾನಿಸುವ ಮೂಲಕ ಆದರದಿಂದ ಸ್ವಾಗತಿಸಿದರು. ಈ ವೇಳೆ ಡಿಕೆಶಿ ಅವರಿಗೆ ಮಾಜಿ ಎಂಎಸ್‌ಐಎಲ್ ಅಧ್ಯಕ್ಷ ಅನಿಲ್ ಕುಮಾರ್ ಸಾಥ್ ನೀಡಿದ್ರು.