
ಕೋಲಾರ, ಮೇ,೧೭- ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯ ಮಂತ್ರಿ ಅಗುವಂತೆ ನಗರದ ಅದಿದೇವತೆ ಕೋಲಾರಮ್ಮ ದೇವಾಲಯದಲ್ಲಿ ೧೦೧ ತೆಂಗಿನಕಾಯಿಗಳನ್ನು ದೇವಾಲಯದ ಅವರಣದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಕೃಷ್ಣೆಗೌಡ ನೇತ್ರತ್ವದಲ್ಲಿ ಕಾಂಗ್ರೇಸ್ ಮುಖಂಡರು ಈಡುಗಾಯಿ ಹೊಡೆದು ಹರಿಕೆ ತೀರಿಸಿದ ಪ್ರಕರಣ ಮಂಗಳವಾರ ನಡೆಯಿತು,
ಈ ಸಂದರ್ಭದಲ್ಲಿ ಕೃಷ್ಣೇಗೌಡ ಅವರು ಮಾತನಾಡಿ ರಾಜ್ಯದಲ್ಲಿ ಕಳೆದ ೩೪ ವರ್ಷಗಳ ನಂತರ ಕಾಂಗ್ರೇಸ್ ಪಕ್ಷವು ಸ್ವತಂತ್ರ್ಯವಾಗಿ ಆಡಳಿತ ನಡೆಸಲು ಮತದಾರರು ಪ್ರಭುಗಳು ಅವಕಾಶ ಕಲ್ಪಿಸಿರುವುದಕ್ಕೆ ತಮ್ಮ ಕೃತಜ್ಞಾನತೆಗಳನ್ನು ಸಲ್ಲಿಸಿದರು,
ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಹಾಗೂ ವಕ್ಕಲಿಗ ಸಮುದಾಯದ ನಾಯಕರಾಗಿರುವ ಡಿ.ಕೆ.ಶಿವಕುಮಾರ್ ಅವರ ನಾಯಕತ್ವಕ್ಕೆ ರಾಜ್ಯಕ್ಕೆ ಅತ್ಯವಶ್ಯಕವಾಗಿದೆ. ಕಾಂಗ್ರೇಸ್ ಪಕ್ಷ ೭೦-೮೦ ಸ್ಥಾನಗಳಿದದ್ದು ೧೩೫ ಸ್ಥಾನಗಳು ಲಭಿಸುವಂತೆ ಮಾಡುವಲ್ಲಿ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಸಂಘಟನೆಗೆ ಅಪಾರ ಶ್ರಮವಹಿಸಿದ್ದಾರೆ. ತಮ್ಮ ಜೀವನವನ್ನೆ ಕಾಂಗ್ರೇಸ್ ಪಕ್ಷಕ್ಕೆ ಮುಡುಪಾಗಿಟ್ಟಿದ್ದಾರೆ. ಅವರಿಗೊ ಒಂದು ಅವಕಾಶ ಕೊಡುವ ಮೂಲಕ ಎರಡನೇ ಸ್ಥಾನದ ಮುಖಂಡರಿಗೆ ಬೆಳೆಸುವ ಮೂಲಕ ಪಕ್ಷದಲ್ಲಿ ಕಾರ್ಯಕರ್ತರಿಗೆ ಮಾದರಿಯಾಗ ಬೇಕಾಗಿದೆ ಎಂದು ಆಶಿಸಿದರು,
ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವು ಬಲವರ್ಧನೆಯಾಗ ಬೇಕಾದರೆ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಕಲ್ಪಿಸಿ, ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾನ್ನಾಗಿ ಮಾಡ ಬೇಕು, ಸಿದ್ದರಾಮಯ್ಯ ಅವರು ಕಳೆದ ಭಾರಿ ೫ ವರ್ಷ ಸುಭದ್ರ ಸರ್ಕಾರ ನೀಡಿದ್ದಾರೆ. ಮುಂದೆ ಮತ್ತೊಬ್ಬರಿಗೆ ಅವಕಾಶ ಕಲ್ಪಿಸ ಬೇಕಾಗಿರುವುದು ಸಮಾಜಿಕ ನ್ಯಾಯ ಅಗಿದೆ. ಅವರು ಚುನಾವಣೆಯಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲು ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯ ಮಂತ್ರಿ ಮಾಡ ಬೇಕಾಗಿದೆ ಎಂದು ತಿಳಿಸಿದರು,
ಕೋಲಾರ್ ಹಿರಿಯ ಕಾಂಗ್ರೇಸ್ ಮುಖಂಡರಾದ ಕೆ.ಹೆಚ್. ಮುನಿಯಪ್ಪ ಅವರಿಗೆ ಉಪಮುಖ್ಯ ಮಂತ್ರಿ ಸ್ಥಾನ ನೀಡ ಬೇಕು. ಕೋಲಾರ ವಿಧಾನ ಸಭಾ ಕ್ಷೇತ್ರಕ್ಕೆ ಕೆ.ಹೆಚ್ ಮುನಿಯಪ್ಪ ಅವರು ಸ್ವರ್ಧಿಸ ಬೇಕಾಗಿತ್ತು. ಅದರೆ ಸಿದ್ದರಾಮಯ್ಯ ಅವರು ಬರುತ್ತಾರೆ ಎಂದು ಕೋಲಾರ ಕ್ಷೇತ್ರವನ್ನು ಬಿಟ್ಟು ಕೊಟ್ಟು ದೇವನ ಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಟಿಕೆಟ್ ಪಡೆದು ವಿಜೇತರಾಗಿದ್ದಾರೆ. ಅದೇ ರೀತಿ ಅವರಿಗೆ ಮುಂದಿನ ದಿನಗಳಲ್ಲಿ ಕನಿಷ್ಟ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನಾದರೂ ನೀಡಿದಲ್ಲಿ ಮಾತ್ರ ಕೋಲಾರ ಅಭಿವೃದ್ದಿಗೆ ಪೂರಕವಾಗಿಲಿದೆ ಎಂದು ಅಭಿಪ್ರಾಯ ಪಟ್ಟರು,
ಕೋಲಾರಮ್ಮ ಅದಿ ದೇವತೆ ಕೆ.ಹೆಚ್. ಮುನಿಯಪ್ಪ ಅವರನ್ನು ಮುಖ್ಯ ಮಂತ್ರಿ ಅಥವಾ ಉಪಮುಖ್ಯ ಮಂತ್ರಿ ಮಾಡಬೇಕೆಂದು ಪ್ರಾರ್ಥಿಸುವುದಾಗಿ ತಿಳಿಸಿದರು,
ಈ ಸಂದರ್ಭದಲ್ಲಿ ಮಾಜೇನಹಳ್ಳಿ ಗ್ರಾ,ಪಂ. ಮಾಜಿ ಸದಸ್ಯ ಶಫೀಯುಲ್ಲಾ, ನಗರಸಭೆ ಮಾಜಿ ಸದಸ್ಯ ಟಮಕ ಲಾಲ್ ಬಹುದ್ದೊರ್ ಶಾಸ್ತ್ರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಮದ್ದೇರಿ ಮುನಿರೆಡ್ಡಿ, ಪ್ರವೀಣ್, ಹರಿ ಮುಂತಾದವರು ಇದ್ದರು,