ಡಿಎಸ್ ೪ ನ ರಾಜ್ಯ ಕಾರ್ಯಕಾರಿಣಿ ಸಮಾವೇಶ


ದಾವಣಗೆರೆ. ನ.೩೦; ಡಿಎಸ್ ೪ ಸಂಸ್ಥಾಪನಾ ದಿನದ ಅಂಗವಾಗಿ ಸ್ವಾಭಿಮಾನಿ ಚಳುವಳಿಯ ಪುನರುತ್ಥಾನ ದಿನಾಚರಣೆ ಹಿನ್ನೆಲೆಯಲ್ಲಿ ಡಿ.೬ ರಂದು ಬೆಳಗ್ಗೆ ೧೦.೩೦ ಕ್ಕೆ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಚೈತ್ಯ ಭೂಮಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಡಿ.೬ ರಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶಸ್ವಾಮೀಜಿ ಉದ್ಘಾಟನೆ ನೆರವೇರಿಸಲಿದ್ದಾರೆ.ಡಿಎಸ್ ೪ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.ನಂತರ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಾದಿ ಮೌಲ್ಯಗಳ ಸಂರಕ್ಷಣೆ ಕುರಿತು ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಡಾ.ಮಹೇಶ್ ಚಂದ್ರಗುರು, ನಂತರ ಪ್ರೊ.ಸಿ.ಕೆ ಮಹೇಶ್,ಪ್ರೊ.ಎ.ಬಿ ರಾಮಚಂದ್ರಪ್ಪ,ಪ್ರೊ.ಟಿ ರಾಜಪ್ಪ,ಪ್ರೊ.ಡಾ.ಹೆಚ್.ವಿಶ್ವನಾಥ್, ಹನಗವಾಡಿ ರುದ್ರಪ್ಪ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಹೊದಿಗೆಋ ರಮೇಶ್,ಎನ್ ರುದ್ರಮುನಿ,ರಾಘವೇಂದ್ರ ನಾಯ್ಕ,ಕೆ.ಎನ್ ಓಂಕಾರಪ್ಪ ಮತ್ತಿತರರು ಆಗಮಿಸಲಿದ್ದಾರೆ ನಂತರ ಸಮಾರೋಪ ಸಮಾರಂಭ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿ.ಹನುಮಂತಪ್ಪ,ವಿಶ್ವನಾಥ್, ಜಿ.ಎಂ ಮಂಜಪ್ಪ,ಐರಣಿ ಚಂದ್ರು,ರಮೇಶ್ ಇತರರಿದ್ದರು.