ಡಿಎಸ್‌ಎಸ್ ಕಾಲ್ನಡಿಗೆ ಜಾಥಾ

ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್‌ರವರ ೬೫ನೇ ಪುಣ್ಯ ಸ್ಮರಣೆ ಪ್ರಯುಕ್ತ ದಸಂಸ (ಸಮತಾವಾದ) ರಾಜ್ಯಾಧ್ಯಕ್ಷ ಹೆಚ್. ಮಾರಪ್ಪ ಅವರ ನೇತೃತ್ವದಲ್ಲಿ ಇಂದು ನಗರದ ಬನಪ್ಪ ಪಾರ್ಕ್‌ನಿಂದ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆವರೆಗೆ ಗುಲಾಬಿ ಹೂಗಳೊಂದಿಗೆ ಕಾಲ್ನಡಿಗೆ ಜಾಥಾ ನಡೆಸಿ ಸದಸ್ಯರು ನಮನ ಸಲ್ಲಿಸಿದರು.

ಬೆಂಗಳೂರು, ಡಿ.೬-ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೫ನೇ ಪರಿನಿರ್ವಾಣ ದಿನಾಚರಣೆ ಅಂಗವಾಗಿ ದಲಿತ ಸಂಘರ್ಷ ಸಮಿತಿ (ಸಮತವಾದ) ನೇತೃತ್ವದಲ್ಲಿ ಬೃಹತ್ ಕಾಲ್ನಾಡಿಗೆ ಜಾಥಾ ನಡೆಸಲಾಯಿತು.

ನಗರದಲ್ಲಿಂದು ಬನ್ನಪ್ಪ ಪಾರ್ಕ್ ಮುಂಭಾಗ ದಸಂಸ ರಾಜ್ಯಾಧ್ಯಕ್ಷ ಎಚ್.ಮಾರಪ್ಪ ನೇತೃತ್ವದಲ್ಲಿ ಜಮಾಯಿಸಿದ ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಘೋಷಣೆ ಕೂಗುತ್ತ ವಿಧಾನಸೌಧ ಮುಂಭಾದ ಅಂಬೇಡ್ಕರ್ ಪ್ರತಿಮೆಗೆ ತಲುಪಿಸಿ ಪುಷ್ಪ ನಮನ ಸಲ್ಲಿಸಿದರು.

ಬೃಹತ್ ಕಾಲ್ನಾಡಿಗೆ ಜಾಥಾಯನ್ನುದ್ದೇಶಿಸಿ ಮಾತನಾಡಿದ ಎಚ್.ಮಾರಪ್ಪ, ಅಂಬೇಡ್ಕರ್ ನಿಧನರಾದ ಡಿ.೬ರನ್ನು ಮಹಾ ಪರಿನಿಬ್ಬಾಣ ಅಥವಾ ಪರಿನಿರ್ವಾಣ ದಿನವನ್ನಾಗಿ ಆಚರಿಸುವ ಮೂಲಕ ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳಲ್ಲಿ ಅವರ ಸ್ಮರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಅವರು ಪುಸ್ತಕ ಪ್ರೇಮಿ. ಅಧ್ಯಯನಶೀಲರಾಗಿದ್ದರು. ಬ್ರಿಟಿಷರು ದೇಶ ಆಳುವ ವೇಳೆಯಲ್ಲೇ ಅವರು ವಿದೇಶದಲ್ಲಿ ಅನೇಕ ಪದವಿಗಳನ್ನು ಪಡೆದರು. ಇದೇ ಕಾರಣಕ್ಕಾಗಿ?ವಿಶ್ವಸಂಸ್ಥೆಯಲ್ಲೂ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ ಎಂದು ನುಡಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ನೀಡಿರುವ ಸಂವಿಧಾನ ವಿಶ್ವದಲ್ಲಿಯೇ ಅತಿ ಶ್ರೇಷ್ಠವಾದುದು. ಅಂತಹ ಪವಿತ್ರವಾದ ಸಂವಿಧಾನವನ್ನು ಅಭ್ಯಾಸ ಮಾಡಲಿಕ್ಕಾಗಿಯೇ ಹೊರದೇಶದವರು ಭಾರತಕ್ಕೆ ಬರುತ್ತಿದ್ದಾರೆ ಎಂದರೆ ಸಂವಿಧಾನ ಎಷ್ಟು ಬಲಶಾಲಿಯಾಗಿದೆ ಎಂಬುದನ್ನು ಅರಿಯಬೇಕು ಎಂದ ಅವರು, ಅಂಬೇಡ್ಕರ್ ಕೇವಲ ದಲಿತರಿಗಷ್ಟೇ ಸೀಮಿತವಾಗಿಲ್ಲ. ಅವರು ಎಲ್ಲಾ ಜಾತಿಯವರ ಉದ್ಧಾರಕ್ಕಾಗಿ ಸಂವಿಧಾನವನ್ನು ರಚಿಸಿ ದೇಶಕ್ಕೆ ನೀಡಿದ್ದಾರೆ ಎಂದು ಪ್ರತಿಪಾದಿಸಿದರು.