ಡಿಎಲ್, ಇನ್ಸೂರೆನ್ಸ್ ಪ್ರತಿಯೊಬ್ಬರು ಮಾಡಿಸಿಕೊಳ್ಳಿ ಕುಟುಂಬಸ್ಥರಿಗೆ ಅನುಕೂಲ :ವಿಜಯ ಕುಮಾರ ಜಟ್ಲಾ

ಸೇಡಂ,ನ,08: ದೇಶದಲ್ಲಿ ರಸ್ತೆಗಳು ಸುಧಾನಗೊಳ್ಳುತ್ತಿದ್ದಂತೆ ಗ್ರಾಮೀಣ ಪ್ರದೇಶದವರು ಹಾಗೂ ನಗರದ ಜನರು ದ್ವಿಚಕ್ರ ತ್ರಿಚಕ್ರ ನಾಲ್ಕು ಚಕ್ರ ಹಾಗೂ ದೊಡ್ಡ ವಾಹನಗಳು ಅತಿ ವೇಗವಾಗಿ ರಸ್ತೆಯಲ್ಲಿ ಹೋಗುವಾಗ ಅಪಘಾತ ಗೊಂದು ಸಾವು ಒಪ್ಪಿರುವ ವ್ಯಕ್ತಿಯು ಡಿಎಲ್ ಇನ್ಸೂರೆನ್ಸ್ ಮಾಡಿಸಿಕೊಂಡರೆ ಕುಟುಂಬ ಸದಸ್ಯರಿಗೆ ಅಪಘಾತದ ಪರಿಹಾರ ಧನ ಇನ್ಸೂರೆನ್ಸ್ ಕಂಪನಿ ಮೂಲಕ ಕೋರ್ಟ್ ನಿಂದ ದೊರಕಿಸು ಕೊಡಬಹುದು ಆದರಿಂದ ಪ್ರತಿಯೊಬ್ಬರು ಡಿಎಲ್, ಇನ್ಸೂರೆನ್ಸ್ ಮಾಡಿಸಿಕೊಂಡೆ ವಾಹನ ರಸ್ತೆ ಮೇಲೆ ಓಡಾಡುವುದನ್ನು ಕಲಿಯಿರಿ ಮತ್ತು ಕುಟುಂಬಸ್ಥರಿಗೂ ಅನುಕೂಲವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ತಾ.ಕಾ.ಸೇ.ಸ. ಅಧ್ಯಕ್ಷರಾದ ಗೌ.ಶ್ರೀ ವಿಜಯ ಕುಮಾರ ಜಟ್ಲಾ ಹೇಳಿದರು.
ತಾಲೂಕಿನ ಹಂದರಕಿ ಮತ್ತು ಬೆನಕನಹಳ್ಳಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿರುವ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ,ತಾಲೂಕು ಆಡಳಿತ, ಅಭಿಯೋಜನಾ ಇಲಾಖೆ, ಪೆÇಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳು ಸೇಡಂ ರವರ ಸಂಯುಕ್ತ ಆಶ್ರಯದಲ್ಲಿ (ಕಾನೂನು ಅರಿವು ನೆರವು) “ಕಾನೂನು ಅರಿವಿನಿಂದ ನಾಗರೀಕರ ಸಬಲೀಕರಣ ಜಾಗೃತಿ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರು ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಣ ಕಲಿಸುವ ಪದ್ಧತಿ ಜಾರಿಗೆ ಇದ್ದರೂ ಬಾಲ್ಯ ವಿವಾಹ ನಿಲ್ಲದಿರುವುದು ಬೇಸರದ ಸಂಗತಿ ಇದರ ಬಗ್ಗೆ ಗ್ರಾಮೀಣ ಜನರು ಅರಿತುಕೊಳ್ಳಬೇಕಿದೆ ಹಾಗೂ ಕುಡಿದು ವಾಹನ ಚಲಾವಣೆ ಮಾಡಿದರೆ ವಾಹನ ಸವಾರರಿಗೆ ದಂಡದ ಜೊತೆಗೆ ಡಿಎಲ್ ಮೂರು ತಿಂಗಳ ಹೋಲ್ಡ್ ಮಾಡಲಾಗುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಮಲ್ಲನಗೌಡ ಬೆನಕನಹಳ್ಳಿ,ವಕೀಲರಾದ ವಸಂತಕುಮಾರ್, ಕೊಡ್ಲಾದ ಉಪನ್ಯಾಸಕರಾದ ಸಂಜೀವರೆಡ್ಡಿ ಪಾಟೀಲ್, ಬಸವರಾಜ ನಾಗೇಶ್ ಮಿಟ್ಟಿ, ಸೇರಿದಂತೆ ಎರಡು ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಇದೆ ನವೆಂಬರ್ 12ರಂದು ಸೇಡಂನಲ್ಲಿ ಇಲೋನ್ ಅದಾಲತ್/ಮೇಗಾ ಲೋಕ್ ಅದಾಲತ್ ಆಯೋಜಿಸಲಾಗಿದೆ ತಾಲೂಕಿನಲ್ಲಿ ಬರುವ
ಸಾರ್ವಜನಿಕರು ತಮ್ಮವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಕ್ಷಣ ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ.

ಮಲ್ಲನಗೌಡ ಬೆನಕನಹಳ್ಳಿ ಅಧ್ಯಕ್ಷರು ತಾಲೂಕು ನ್ಯಾಯವಾದಿಗಳ ಸಂಘ ಸೇಡಂ
ಬಿಳಿ ಹಾಳೆ ಮೇಲೆ, ಇಬ್ಬರ ನಡುವೆ ನಡೆದ ಸಂಧಾನ ಪತ್ರ ನೋಂದಣಿ ಇಲ್ಲದಿದ್ದರೆ ವ್ಯರ್ಥ, ನ್ಯಾಯ ಸಿಗಲು ಸಾಧ್ಯವೇ ಇಲ್ಲ ಸಣ್ಣಪುಟ್ಟ ಹಣಕಾಸು ಆಸ್ತಿ ಪತ್ರ ಪ್ರತಿಯೊಬ್ಬರು ಮಾಡಿಸಿಕೊಳ್ಳಿ ನೊಂದಣಿ ಮಾಡಿಸಿಕೊಳ್ಳುವ ಮೂಲಕ ಇಬ್ಬರು ಸೇಫ್ ಇರಲು ಮುಂದಾಗಿ.

ಗೌ.ನ್ಯಾ. ಶ್ರೀ ವಿಜಯ ಕುಮಾರ ಜಟ್ಲಾ
ಹಿರಿಯ ಸಿವಿಲ್ ನ್ಯಾಯಾಧೀಶರು ತಾ.ಕಾ.ಸೇ.ಸ. ಅಧ್ಯಕ್ಷರು ಸೇಡಂ