ಡಿಎಂಕೆ ಪಟ್ಟಿ ಬಿಡುಗಡೆ: ೧೧ಮಂದಿ ಹೊಸಬರಿಗೆ ಮಣೆ

ಚೆನ್ನೈ, ಮಾ. ೨೦- ಲೋಕಸಭೆ ಚುನಾವಣೆಗೆ ಮೊದಲ ಹಂತದಲ್ಲಿ ತಮಿಳುನಾಡಿನ ಎಲ್ಲಾ ೩೯ ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಡಿ ಬಿಡುಗಡೆ ಮಾಡಿದೆ.

ದ್ರಾವಿಡ ಮುನ್ನೇತ್ರ ಕಳಗಂ ಚೆನ್ನೈನ ಅರಿವಲಯಂ ಕೇಂದ್ರ ಕಚೇರಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ೧೧ ಹೊಸ ಮುಖಗಳು ಸೇರಿದಂತೆ ಹಾಲಿ ಸಂಸದರಿಗೆ ಮತ್ತೊಮ್ಮೆ ಸ್ಪರ್ದೇಗೆ ಅವಕಾಶ ಮಾಡಿಕೊಡಲಾಗಿದ್ದು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಚೆನ್ನೈನಿಂದ ದಯಾನಿಧಿ ಮಾರನ್ , ತೂತುಕುಡಿಯಿಂದ , ಕನಿಮೋಳಿ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ತಂಗಪಾಂಡಿಯನ್ ಚೆನ್ನೈ ದಕ್ಷಿಣ, ಕಲಾನಿಧಿ ವೀರಸಾಮಿ ಚೆನ್ನೈಉತ್ತರ, ಎಸ್ ಜಗತ್ರಾಕ್ಷಗನ್ – ಅರಕ್ಕೋಣಂ ಹಾಗು ಟಿ ಆರ್ ಬಾಲು ಶ್ರೀಪೆರಂಬದೂರು ಮತ್ತು ಕತಿರ್ ಆನಂದ್ – ವೆಲ್ಲೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಇವರಲ್ಲದೆ ಎ ಮಣಿ – ಧರ್ಮಪುರಿ,, ಸಿ ಎನ್ ಅಣ್ಣಾದೊರೈ – ತಿರುವಣ್ಣಾಮಲೈ ಸೇಲಂನಿಂದ ಟಿ ಎಂ ಸೆಲ್ವಗಣಪತಿ, ಈರೋಡ್‌ನಿಂದ ಕೆ ಇ ಪ್ರಕಾಶ್, ಎ ರಾಜಾ – ನೀಲಗಿರಿ, ಗಣಪತಿ ಪಿ ರಾಜ್‌ಕುಮಾರ್ – ಕೊಯಮತ್ತೂರು, ಅರುಣ್ ನೆಹರು- ಪೆರಂಬಲೂರು, ಎಸ್ ಮುರಸೋಲಿ- ತಂಜಾವೂರು, ತಂಗ ತಮಿಳ್ಸೆಲ್ವನ್ – ತೇಣಿ ಮತ್ತು ಕನಿಮೊಳಿ – ತೂತುಕುಡಿ ಲೋಕಸಭಾ ಕ್ಷೇತ್ರದಿಙದ ಸ್ಪರ್ಧೆ ಮಾಡಲಿದ್ದಾರೆ.

ಒಟ್ಟಾರೆಯಾಗಿ ಪಕ್ಷದ ಮೊದಲ ಪಟ್ಟಿಯಲ್ಲಿ ೧೧ ಹೊಸ ಮುಖಗಳಿದ್ದಾರೆ. ಇದೇ ಸಭೆಯಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಮ್ಮುಖದಲ್ಲಿ ಡಿಎಂಕೆ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಬಿಜೆಪಿ ವಿರುದ್ದ ವಾಗ್ದಾಳಿ:

“ಡಿಎಂಕೆ ಪ್ರಣಾಳಿಕೆ ಮಾತ್ರವಲ್ಲ, ಜನರ ಪ್ರಣಾಳಿಕೆ,” ಮುಖ್ಯಮಂತ್ರಿ ಎಂಕೆವ ಸ್ಟಾಲಿನ್ ಅವರು ೨೦೧೪ ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅವರು ದೇಶವನ್ನು “ನಾಶಗೊಳಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂಡಿಯಾ ಮೈತ್ರಿಕೂಟವನ್ನು ರಚಿಸಿದ್ದು ಮತ್ತು ೨೦೨೪ ರಲ್ಲಿ ನಾವು ಕೇಂದ್ರದಲ್ಲಿ ಸರ್ಕಾರವನ್ನು ರಚಿಸುತ್ತೇವೆ” ಎಂದು ಸ್ಟಾಲಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ