ಡಿಆರ್ ಡಿಒ ದಿಂದ ಮತ್ತೊಂದು ಸಾಧನೆ

ನವದೆಹಲಿ,ನ. 13- ಕಳೆದ ಹಲವು ದಿನಗಳಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಪೈಪೋಟಿ ಬಿದ್ದವರಂತೆ ರಾಕೆಟ್ ಮತ್ತು ಮತ್ತು ಕ್ಷಿಪಣಿಗಳ ಯಶಸ್ವಿ ಉಡಾವಣೆ ಮಾಡುತ್ತಿವೆ.

ಭಾರತೀಯ ಬಾಹ್ಯಾಕಾಶ ಸಂಶೋಧನೆ ಇತ್ತೀಚೆಗಷ್ಟೇ ಪಿಎಸ್ ಎಲ್ ವಿ ಉಪಗ್ರಹ ಯಶಸ್ವಿ ಉಡಾವಣೆ ಮಾಡಿದ್ದು ಇದೀಗ ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಎಲ್ಲಾ ಹವಾಮಾನದಲ್ಲಿಯೂ ತ್ವರಿತ ಪ್ರಕ್ರಿಯೆ ಮತ್ತು ದಾಳಿ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ‌

ಕ್ಷಿಪಣಿ ಸದ್ಯದಲ್ಲೇ ರಕ್ಷಣಾ ಪಡೆಗಳನ್ನು ಸೇರಿಕೊಳ್ಳಲು ಸಜ್ಜಾಗಿದೆ ಇದರಿಂದಾಗಿ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಬಂದಿದೆ.

ಒಡಿಶಾದ ಚಂಡಿಪುರ ವಲಯದಲ್ಲಿ ಮದ್ಯಾಹ್ನ 3.40 ರ ಸುಮಾರಿಗೆ ಕ್ಷಿಪಣಿಯ ಯಶಸ್ವಿ ಪ್ರಯೋಗ ನಡೆದಿದೆ.

ಈ ಕ್ಷಿಪಣಿ 15 ಕಿಲೋ ಮೀಟರ್ ಎತ್ತರದವರೆಗೂ ಹೋಗಿ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಕುಳಿತಲ್ಲಿಯೇ ತಂತ್ರಜ್ಞಾನದ ಸಹಾಯದಿಂದ ಈ ಕ್ಷಿಪಣಿ ದಾಳಿ ಮಾಡಬಹುದಾಗಿದೆ.ಎಲ್ಲಾ ಹವಾಮಾನ ಸಂದರ್ಭದಲ್ಲಿ ದಾಳಿ‌ನಡೆಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.