ಡಿಆರ್‌ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಲ್ಲಿ ಇಂಧನ ದಕ್ಷತಾ ತರಬೇತಿ

 ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨:: ಡಿಆರ್‌ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದಿಂದ ಬ್ಯುರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಹಾಗೂ ಕರ್ನಾಟಕ ನವಿಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್‌ಇಡಿಎಲ್)ಇವರ ಸಹಯೋಗದೊಂದಿಗೆ ಪಂಪ್ /ಉಪಕರಣಗಳ ತಂತ್ರಜ್ಞರಿಗೆ ಇಂಧನ ದಕ್ಷತಾ ಕ್ರಮಗಳ ಬಗ್ಗೆ ತಾಂತ್ರಿಕ ತರಬೇತಿ’ಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಚಾರ್ಯ ಸಿ. ಆರ್. ವಿಶ್ವೇಶ್ವರ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಚಾಲನೆಗೊಂಡಿತು. ರಚನಾ ಎನರ್ ಕೇರ್ ಗ್ರೂಪ್‌ನ ರಾಜೀವ್ ಪಿ. ನಾಡಿಗ್ ಮತ್ತು ರಾಮಗೋಪಾಲ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಇಂಧನ ದಕ್ಷತಾಕ್ರಮಗಳ ಬಗ್ಗೆ ಥಿಯರಿ ಹಾಗೂ ಪ್ರತ್ಯಕ್ಷಕೆಗಳ ಮುಖಾಂತರ ವಿವರಿಸಿದರು. ವಿದ್ಯುತ್ ವಿಭಾಗದ ಮುಖ್ಯಸ್ಥ ಎಚ್. ಕೆ. ಮಂಜಪ್ಪ ಇವರು ಕಾರ್ಯಕ್ರಮದ ಸಂಯೋಜಕರಾಗಿ ಪಾಲ್ಗೊಂಡಿದ್ದರು. ಉಪನ್ಯಾಸಕರಾದ ಪ್ರಹ್ಲಾದ ಎಂ. ಬಿ. ಸ್ವಾಗತಿಸಿದರು, ಎಸ್.ಎನ್. ದಿವ್ಯಶ್ರೀ ವಂದಿಸಿದರು. ಶ್ರೀಮತಿ ರೇಣುಕಾ ಕಾರ್ಯಕ್ರಮ ನಿರೂಪಿಸಿದರು.