ಡಾ.ಹಂಸಲೇಖ ಹೇಳಿಕೆಗೆ ದ.ಸಂ.ಒ ಬೆಂಬಲ – ಎಸ್.ಮಾರೆಪ್ಪ

ರಾಯಚೂರು,ನ.೨೪-ಸಂಗೀತ ನಿರ್ದೇಶಕ ಡಾ.ಹಂಸಲೇಖರವರ ಹೇಳಿಕೆಯನ್ನು ದಲಿತ ಸಂಘಟನೆಗಳ ಒಕ್ಕೂಟ ಬೆಂಬಲಿಸುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಸ್.ಮಾರೆಪ್ಪ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ಹಂಸಲೇಖ ಶ್ರೀ ಪೇಜಾವರ ಸ್ವಾಮಿಗಳ ಹೆಸರನ್ನು ಪ್ರಸ್ತಾಪಿಸಿದ್ದು,ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಹಂಸಲೇಖ ಅವರು ಕ್ಷಮೆ ಯಾಚಿಸಿದರು ಅವರ ವಿರುದ್ಧ ದೂರು ದಾಖಲಿಸಿದ್ದು,ಖಂಡನೀಯ.ಹಂಸಲೇಖರ ವರ ವಿರುದ್ದ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಬ್ರಾಹ್ಮಣ್ಯವನ್ನು ದಲಿತ ಸಂಘಟನೆಗಳ ಒಕ್ಕೂಟ ಖಂಡಿಸುತ್ತದೆ.
ಹಂಸಲೇಖರವರ ಮಾತುಗಳಲ್ಲಿ ಭಲಿತವರು ದಲಿತರ ಮನೆಗಳಿಗೆ ಬರುವುದು ದೊಡ್ಡದಲ್ಲ , ದಲಿತರನ್ನು ಫಲಿತವರ ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿಸಿದರೆ ಅದು ದೊಡ್ಡತನ ಎಂದು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರೆಸ್ನಿಸಿದರು.ದಲಿತರ ಮನೆಗೆ ಬರುವವರು ದಲಿತರ ಆಹಾರವಾದ ಮಾಂಸ ನೀಡಿದರೂ ಉಣ್ಣಬೇಕಾಗುತ್ತದೆ. ಎನ್ನುವ ಅರ್ಥದಲ್ಲಿ ಸ್ವಾಮಿಜಿ ಮೇಕೆಯ ರಕ್ತದ ಫ್ರೈ ಕೊಟ್ಟಿದ್ದರೆ ಸ್ವೀಕರಿಸುತ್ತಿದ್ದರೆ ಎಂದು ಕೇಳಿದ್ದರಲ್ಲಿ ಯಾರ ವ್ಯಕ್ತಿತ್ವಕ್ಕೂ ಧಕ್ಕೆ ತರುವ ಮಾತಲ್ಲ.ಭಕ್ತರು ನೀಡಿದ ಆಹಾರವನ್ನು ಸ್ವೀಕರಿಸುವ ಮನಸ್ಥಿತಿ ಇಲ್ಲದ ವ್ಯಕ್ತಿತ್ವ ಪರಿವರ್ತನೆ ತರಲಾರದು, ಗೌತಮಬುದ್ಧರು ಬಿಕ್ಕುವಾಗಿ ಭಕ್ತರು ನೀಡಿದ ಆಹಾರವನ್ನು ಸ್ವೀಕರಿಸಿದ ಮತ್ತು ಶಿವನು ಮಾದರ ಚನ್ನಯ್ಯನ ಅಂಬಲಿಗೆ ಆಸೆಪಟ್ಟನೆಂಬ ಪರಂಪರೆಯ ಇತಿಹಾಸವನ್ನು ನಾವು ಕಾಣುತ್ತೇವೆ. ಹಂಸಲೇಖರವರ ಮಾತನ್ನು ಮೇಲಿನ ಸಂದರ್ಭದಂತೆ ಸ್ವೀಕರಿಸಬೇಕಾದ ಶ್ರೀ ತೇಜಾವರ ಶ್ರೀಗಳ ಕುಲಸ್ಥರು ಮತ್ತು ಅವರ ಭಕ್ತರು ಯತಿಗಳಿಗೆ ಅವಮಾನವಾಯಿತೆಂದು ಅರಚಾಡುತ್ತಾ ಹಂಸಲೇಖರವರ ವಿರುದ್ಧ ಬೆದರಿಕೆ ಒಡ್ಡುತ್ತಿರುವುದು ಖಂಡನೀಯ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಮಾಜ ಪರಿವರ್ತನಾ ಚಳುವಳಿಗಾರರ ವಿಚಾರವನ್ನು ಉತ್ತುವ ಹಾಗೂ ಬಿತ್ತುವ ಹಲವರನ್ನು ನಾವು ಕಳೆದುಕೊಂಡಿದ್ದೇವೆ . ಅಂತಹವರ ಸಾಲಿನಲ್ಲಿರುವ ಡಾ. ಕೆ.ಎಸ್ . ಭಗವಾನ್, ಡಾ.ಹಂಸಲೇಖ, ಡಾ.ಸಿ.ಎಸ್ . ದ್ವಾರಕನಾಥ ಇಂತಹವರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ ಹಾಗೂ ಅವರನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಈ ಸಂದರ್ಭದಲ್ಲಿ ಎಂ.ಆರ್.ಭೇರಿ,ರವೀಂದ್ರನಾಥ್ ಪಟ್ಟಿ,ಶರಣಪ್ಪ ದಿನ್ನಿ,ಅಬ್ರಹಾಂ ಇದ್ದರು.