ಡಾ. ಸೊಲಬಕ್ಕನವರ ನಿಧನಕ್ಕೆ ಶ್ರಂದಾಜಲಿ

ಬಾಗಲಕೋಟೆ,ನ.20: ರಾಜ್ಯ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ.ಟಿ.ಬಿ.ಸೊಲಬಕ್ಕನವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಕರ್ನಾಟಕ ಬಯಲಾಟ ಅಕಾಡೆಮಿಯ ಕಚೇರಿಯಲ್ಲಿ ರಿಜಿಸ್ಟ್ರಾರ್ ಹೇಮಲತಾ ಎನ್ ಹಾಗೂ ಸಿಬ್ಬಂದಿಗಳು ಸೇರಿ ಅವರಿಗೆ ಭಾವಪೂರ್ಣ ಶ್ರದಾಂಜಲಿ ಅರ್ಪಿಸಿದರು.
ನಂತರ ಮಾತನಾಡಿ ರಿಜಿಸ್ಟ್ರಾರ್ ದೊಡ್ಡಾಟವನ್ನೆ ಉಸಿರಾಗಿಸಿಕೊಂಡು ನಾಡಿಗೆ ಪರಿಚಯಸಿದ, ಹೊಸ ಹೊಸ ಪ್ರಯೋಗ, ಪ್ರಯತ್ನಗಳಲ್ಲಿ ತೊಡಗಿ ಕಲಾಪ್ರಪಂಚಕ್ಕೆ ದೊಡ್ಡಾಟದ ಅಟ್ಟ-ಕಟ್ಟಿ ದೊಡ್ಡಾಟಕ್ಕೆ ನಾಂದಿ ಹಾಡಿದ್ದಾರೆ. ಅಕಾಡೆಮಿ ಅಧ್ಯಕ್ಷರಾಗಿ ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಅನೇಕ ಎಲೆಮರೆಯ ಕಾಯಿಂತಿರುವ ಕಲಾವಿದ, ವಿದ್ವಾಂಸರಿಗೆ ನೆರವು ಹಾಗೂ ಪ್ರಶಸ್ತಿ ನೀಡುವುದರ ಮೂಲಕ ಅವರನ್ನೆಲ್ಲರನ್ನು ಬೆಳಕಿಗೆ ತರುವ ಕೆಲಸ ಮಾಡಿದ್ದಾರೆ.
ಅಲ್ಲದೇ 2020-21ನೇ ಸಾಲಿನ ಯೋಜನೆಗಳಲ್ಲಿ ಬಯಲಾಟ ಸಂಪುಟ ರಚನೆ, ವಿಶ್ವವಿದ್ಯಾಲಯದ ಕಾರ್ಯಕ್ರಮಗಳು, ಬಯಲಾಟ ಸಂಗೀತಗಳ ದಾಖಲೀಕರಣ ಮೊದಲಾದ ಮಹತ್ವಕಾಂಕ್ಷೆ ಯೋಜನೆಗಳನ್ನು ಹಾಕಿಕೊಂಡಿದ್ದು, ಇವರ ನಿಧನದಿಂದ ಕರ್ನಾಟಕ ಜಾನಪದ ಲೋಕ ಶ್ರೇಷ್ಠ ವಿದ್ವಾಂಸರೊಬ್ಬರನ್ನು ಕಳೆದು ಕೊಂಡಂತಾಗಿದೆಯೆಂದು ತಿಳಿಸಿದರು.