ಡಾ.ಸುಭಾಷಚಂದ್ರ ಸಮ್ಮುಖದಲ್ಲಿ ನೂರಾರು ಯುವಕರು ಎಎಪಿ ಪಕ್ಷಕ್ಕೆ ಸೇರ್ಪಡೆ

ರಾಯಚೂರು,ಜ.೫- ತಾಲೂಕಿನ ಕಲ್ಮಲಾ ಗ್ರಾಮದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ರೈತರು ಭಾರಿ ಸಂಖ್ಯೆಯಲ್ಲಿ ಬೆಂಬಲಿಸಿದರು ಪಕ್ಷದ ಆಕಾಂಕ್ಷಿ ಡಾ.ಸುಭಾಷಚಂದ್ರ ಸಂಬಾಜಿ ಅವರ ಸಮ್ಮುಖದಲ್ಲಿ ನೂರಾರು ಯುವಕರು ಎ.ಎ.ಪಿ ಗೆ ಸೇರ್ಪಡೆಗೊಂಡರು
ಕಲ್ಮಲಾ ಗ್ರಾಮದಲ್ಲಿ ಪಕ್ಷದ ವತಿಯಿಂದ ಗ್ರಾಮ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮದ ರೈತರು ಸ್ವಯಂ ಪ್ರೇರಿತರಾಗಿ ಬಂದು ಪಕ್ಷದ ಸಿದ್ಧಾಂತ ಬಗ್ಗೆ ಮೆಚ್ಚಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡರು
ಕಾಂಗ್ರೆಸ್ ಬಿಜೆಪಿ ,ಜೆಡಿಎಸ್ ಪಕ್ಷ ತೊರೆದು ನೂರಾರು ಯುವಕರು ಯಜಮಾನರು ಮಹಿಳೆಯರು ಪಕ್ಷದ ಸಿದ್ಧಾಂತಗಳನ್ನು ಮನಸಾರೆ ಮೆಚ್ಚಿ ನೂರಾರು ಯುವಕರು ಎ.ಎ.ಪಿ ಗೆ ಸೇರ್ಪಡೆಗೊಂಡರು
ಸೇರ್ಪಡೆ ನಂತರ ಡಾ. ಸುಭಾಷಚಂದ್ರ ಅವರು ಮಾತನಾಡಿ ಪಂಜಾಬ್ ಗಳಲ್ಲಿ ಎ.ಎ.ಪಿ ಸರ್ಕಾರದಿಂದ ಹತ್ತು ಹಲವು ಉಚಿತ ಸೌಲಭ್ಯಗಳನ್ನು ಉಚಿತವಾಗಿ ಕೊಡಲಾಗುತ್ತದೆ ಅಲ್ಲಿನ ಜನರು ಪಡೆದಂತೆ ಕರ್ನಾಟಕದ ಜನತೆ ಎ.ಎ.ಪಿ ಸರ್ಕಾರವನ್ನು ತಂದು ಸೌಲಭ್ಯಗಳನ್ನು ಪಡೆಯಿರಿ ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ಜೋನ್-೦೫ ಸಂಯೋಜಕರಾದ ಕೆ.ಬಸವರಾಜ ಗುತ್ತೇದಾರ ಮತ್ತು ಗ್ರಾಮೀಣ ಸಂಘಟನಾ ಕಾರ್ಯದರ್ಶಿ ಆರ್. ವೀರೇಶ್ ಇನ್ನಿತರರು ಉಪಸ್ಥಿತರಿದ್ದರು.
ಈ ಒಂದು ಸೇರ್ಪಡೆಗೊಂಡವರಾದ ಬಸವರಾಜ ಸಾಹುಕಾರ,ಕರಿಲಿಂಗಪ್ಪ, ಎಂ ಬಸವರಾಜ,ಬಸವರಾಜ ಹದ್ಲಗುಂಟೆ , ದೇವಯ್ಯಸ್ವಾಮಿ,ವಿರುಪಾಕ್ಷಿ ,ನಜೀರ್ , ಸುಲೋಚನಾ, ಗೌರಮ್ಮ,ಇನ್ನಿತರರು ಈ ಸಂದರ್ಭದಲ್ಲಿ ಪಕ್ಷ ಸೇರ್ಪಡೆಗೊಂಡರು.