ಡಾ.ಸುಧಾಮೂರ್ತಿ ಶಿಕ್ಷಣ ಸಂಸ್ಥೆಯಲ್ಲಿ ದೂರ ಶಿಕ್ಷಣಕ್ಕೆ ಅವಕಾಶ

ಲಿಂಗಸೂಗೂರು.ನ.೧೮-ಲಿಂಗಸುಗೂರಿನ ಸಾನ್ವಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಟ್ರಸ್ಟ್ನ ಡಾ.ಸುಧಾಮೂರ್ತಿ ಮುಕ್ತ ಮತ್ತು ದೂರ ಶಿಕ್ಷಣ ಹಾಗೂ ಆನ್‌ಲೈನ್ ಶಿಕ್ಷಣ ಸಂಸ್ಥೆಯು ಕೇಂದ್ರ ಸರ್ಕಾರ, ರಾಜ್ಯ, ಸರ್ಕಾರ ಯುಜಿಸಿ, ಡಿಇಸಿ, ಎಮ್‌ಹೆಚ್‌ಆರ್‌ಡಿ ಮಾನ್ಯತೆ ಹೊಂದಿದೆ ಉನ್ನತ ಶಿಕ್ಷಣ ಎಲ್ಲರಿಗೂ ಬೇಕು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕೆಂದು ಆಡಳಿತಾಧಿಕಾರಿ ಯಮನಪ್ಪ ಹೇಳಿದರು.
ಪಟ್ಟಣದ ಪತ್ರಿಕೆ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮೈಸೂರು ಕಲಿಕಾರ್ಥಿ ಸಹಾಯ ಕೇಂದ್ರದಲ್ಲಿ ೨೦೨೧-೨೨ನೇ ನವಂಬರ್ ಆವೃತ್ತಿಗೆ ಪ್ರಥಮ ವರ್ಷದ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಸರ್ಕಾರಿ ಹಾಗೂ ಉದ್ಯೋಗ ಪಡೆಯಲು ರೆಗ್ಗುಲರ್ ಶಿಕ್ಷಣಕ್ಕೆ ಸರಿಸಮನಾದ ಕೋರ್ಸಗಳು ಪಿಜಿ ಎಮ್‌ಎ ಎಲ್ಲಾ ವಿಷಯಗಳು, ಪಿಜಿ ಎಮ್‌ಎಸ್‌ಸಿ ಎಲ್ಲಾ ವಿಷಯಗಳು, ಎಮ್‌ಕಾಂ, ಎಮ್‌ಬಿಎ ಹಾಗೂ ಯುಜಿ ವಿಷಯಗಳಲ್ಲಿ ಬಿಎ, ಬಿಕಾಂ, ಬಿ ಲೈಬ್, ಐಎಸ್‌ಸಿ, ಬಿಎಸ್‌ಸಿ ಹಾಗೂ ತರಬೇತಿ ವಿಷಯಗಳಲ್ಲಿ ಬಿಇಡ್ ಇರುತ್ತವೆ.
ಜಿಲ್ಲಾದ್ಯಾಂತ ಎರಡು ಸಂಸ್ಥೆಗಳ ಪೈಕಿ ನಮ್ಮ ಸಂಸ್ಥೆಯು ಒಂದು ಮಾನ್ಯತೆ ಪಡೆದಿದೆ, ಕರ್ನಾಟಕದಲ್ಲಿ ಅಧಿಕೃತ ಏಕೈಕ ವಿಶ್ವವಿದ್ಯಾಲಯ ಅದು ಅಂದರೆ ಮೈಸೂರು ವಿಶ್ವವಿದ್ಯಾಲಯ ಒಂದಾಗಿದೆ, ಸುಪ್ರೀಕೋರ್ಟ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಇದೆ ಎಂದು ಕೋರ್ಟ ಜಡ್ಜಮೆಂಟ್ ಆಗಿದೆ, ಸರ್ಕಾರದ ಎಲ್ಲಾ ನೇಮಕಾತಿ ಉದ್ದೋಗಳಿಗೂ ಮಾನ್ಯತೆ ಇದೆ, ಎಲ್ಲಾ ಮುಂದಿನ ದಿನದಲ್ಲಿ ನಮ್ಮ ಸಂಸ್ಥೆಯಲ್ಲಿ ಕಳೆದ ವರ್ಷ ೧೫೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಈ ವರ್ಷ ಈಗಾಗಲೇ ೫೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಪಡೆದಿದ್ದು ಸದರಿ ಪ್ರವೇಶ ಪಡೆಯಲು ಕೋನೆಯ ದಿನಾಂಕ ಡಿಸೆಂಬರ್ ೨೦೨೧ ಇರುತ್ತದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ೯೬೩೨೫೯೬೧೫೮, ೯೬೩೨೫೯೬೧೪೬, ೬೩೬೦೦೫೩೧೧೫ ಸಂಪರ್ಕಿಸಿ.
ಈ ಸಂದರ್ಭದಲ್ಲಿ ಪ್ರಾಚಾರ್ಯರು ಶರಣಮ್ಮ, ಉಪನ್ಯಾಸಕ ವಿಠಲ್ ಹುನಗುಂದ ಇದ್ದರು.