ಡಾ. ಸಿ.ಆರ್. ನಸೀರ್ ಅಹಮದ್ ಗೆ ಮೌಲಾನಾ ಆಜಾದ್ ಪ್ರಶಸ್ತಿ

ದಾವಣಗೆರೆ. ಮಾ.8; ಸಮಾಜ ಸೇವಕರಾದ ಡಾ.ಸಿ.ಆರ್. ನಸೀರ್ ಅಹಮದ್‌ರವರಿಗೆ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಉರ್ದು ಚಿಲ್ಟನ್ಸ್ ಅಕಾಡೆಮಿ, ಶಿಕಾರಿಪುರ ವತಿಯಿಂದ ಪ್ರಸಕ್ತ ಸಾಲಿನ 2022-23 ಮೌಲಾನಾ ಆಜಾದ್ ಪ್ರಶಸ್ತಿಯನ್ನು ಶಿಕಾರಿಪುರದಲ್ಲಿ ಇತ್ತೀಚಿಗೆ ನಡೆದ ಭಾರತ ಸಮ್ಮೇಳನದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ವೀರಭದ್ರಪ್ಪರವರು ನೀಡಿ ಸನ್ಮಾನಿಸಿದರು. ಈ ಸಮಾರಂಭದಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯರಾದ  ಬಿ.ಎಸ್‌. ರಾಘವೇಂದ್ರ,, ಶಿಕಾರಿಪುರದ ಮುರಘಾಶಾಖಾಮಠದ ಸ್ವಾಮೀಜಿ, ಫಾದರ್ ಡಿಸೋಜಾ ಮತ್ತು ಆನೇಕ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳುಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡಮಿಯ ಅಧ್ಯಕ್ಷರಾದ ಡಾ.ಹಫೀಜ್ ಕರ್ನಾಟಕಿಯವರು ವಹಿಸಿದ್ದರು.