ಬೆಂಗಳೂರು,ಜೂ.೧೨-ಕರ್ನಾಟಕ ದಲಿತ ಒಕ್ಕೂಟದಿಂದ ನಾಡೋಜ ಡಾ. ಸಿದ್ದಲಿಂಗಯ್ಯರವರ ದ್ವಿತೀಯ ವರ್ಷದ ಪರಿನಿಬ್ಬಾಣ ಸ್ಮರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಮಾಜಿ ಸಚಿವೆ ಹಾಗೂ ಹಿರಿಯ ಸಾಹಿತಿಗಳಾದ ಬಿ.ಟಿ.ಲಲಿತಾ ನಾಯಕ್ ಅವರು ಡಾ.ಸಿದ್ದಲಿಂಗಯ್ಯರವರಿಗೆ ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಆರ್‌ಪಿಐನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮತ್ತು ಡಾ.ಎನ್.ಮೂರ್ತಿ, ಎಂ. ಮುತ್ತುರಾಜು ಮತ್ತಿತರರು ಇದ್ದರು.