ಡಾ ಸಿದ್ದಣ್ಣಾ ಉತ್ನಾಳ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ

ವಿಜಯಪುರ:ಮಾ.12: ಮಾರ್ಚ್ 23 ,24 ರಂದು 18 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಡಾ ಸಿದ್ದಣ್ಣಾ ಉತ್ನಾಳ ಆಯ್ಕೆ ಆಗಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಮತದಾನ ಮಾಡುವದರ ಮೂಲಕ ಡಾ ಸಿದ್ದಣ್ಣಾ ಉತ್ನಾಳ ಆಯ್ಕೆಗೊಂಡಿದ್ದಾರೆ.

ಬಸವನ ಬಾಗೇವಾಡಿ ತಾಲೂಕಿನ ದೇಗಿನಾಳ ಗ್ರಾಮದಲ್ಲಿ ಜನಿಸಿದ ಡಾ ಸಿದ್ದಣ್ಣಾ ಉತ್ನಾಳ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಕೆಎಲ್ ಇ ಸಂಸ್ಥೆಯ ಅಥಣಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಹೊಂದಿದ್ದಾರೆ. ಅನುಭಾವ ಸಾಹಿತ್ಯ ಚಿಂತನ ಪ್ರಬಂಧಕ್ಕೆ ಪಿಎಚ್ ಡಿ ಪದವಿ ಪಡೆದಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಇಪ್ಪತ್ತು ಕೃತಿಗಳನ್ನು ಹಾಗೂ ಹದಿನೈದಕ್ಕೂ ಹೆಚ್ಚು ಸಂಪಾದಿತ ಕೃತಿಗಳನ್ನು ನೀಡಿದ್ದಾರೆ. ಕರ್ನಾಟಕ ಸರಕಾರ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಬೆಂಗಳೂರು, ಕನ್ನಡ ಪುಸ್ತಕ ಪ್ರಾಧಿಕಾರ, ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಸಿಂಡಿಕೇಟ್ ಸದಸ್ಯರಾಗಿ ಹಂಪಿ ಕನ್ನಡ ವಿವಿ ಪ್ರಸಾರಾಂಗ ಬಾಹ್ಯ ಸಲಹೆಗಾರರಾಗಿ ಹಾಗೂ ಜಾನಪದ ವಿವಿ ಗೊಟಗೂಡಿ ವಿಸ್ತರಣೆ ಮತ್ತು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಅನುಪಮ ಪ್ರಕಾಶನಕ್ಕೆ ಹುಟ್ಟು ಹಾಕಿದ ಇವರು ನಾಡಿನ ಪ್ರಮುಖ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿದ್ದಾರೆ. ಅನುಪಮ ಪ್ರಕಾಶನಕ್ಕೆ ಕೇಂದ್ರ ಸರಕಾರದ ಪ್ರಶಸ್ತಿ ಬಂದಿದೆ

1990 ರಲ್ಲಿ ಏಕಕಾಲಕ್ಕೆ ಹನ್ನೆರಡು ಕೃತಿಗಳನ್ನು ಪ್ರಕಟಿಸಿದ್ದು ಇತಿಹಾಸ. ಗಡಿ ಭಾಗದ ಸಂಕದಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. 2019 ರಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜೀವಮಾನ ಸಾಧನೆ ಪರಿಗಣಿಸಿ ಪೆÇ್ರ ಕೆ ಜಿ ಕುಂದಣಗಾರ ಗಡಿನಾಡ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಡಾ ಸಿದ್ದಣ್ಣಾ ಉತ್ನಾಳ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅಧ್ಯಯನ, ಅಧ್ಯಾಪನ, ಕನ್ನಡ ಕೈಂಕರ್ಯ , ಪ್ರಕಾಶನ, ಸಂಶೋಧನೆ, ಸಂಸ್ಕøತಿಕ ಸಂಘಟನೆಗೆ ಅನನ್ಯ ಕೊಡುಗೆ ನೀಡಿದ್ದಾರೆ ವೀರ ಗಣಾಚಾರಿ, ಗುಡ್ಡಾಪುರ ದಾನಮ್ಮ , ಚಿನ್ಮಯ ಚೇತನ, ಲಚ್ಯಾಣ ಸಿದ್ದಲಿಂಗ ಮಹಾರಾಜರು, ಜತ್ ಶಿವಲಿಂಗವ್ವ ಮುಂತಾದ 25 ಗ್ರಂಥಗಳು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹಾಸೀಂಪೀರ್ ವಾಲೀಕಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತದಾನ ಪ್ರಕ್ರಿಯೆ ವಿಜಯಕುಮಾರ ಘಾಟಗೆ ನಿರ್ವಹಿಸಿದರು. ಮಹಾದೇವ ರೆಬಿನಾಳ, ಕೆ ಸುನಂದಾ, ಡಾ ಸಂಗಮೇಶ ಮೇತ್ರಿ, ರವಿ ಕಿತ್ತೂರ, ಮಲ್ಲಿಕಾರ್ಜುನ ಅವಟಿ, ಮಹಮ್ಮದ್ಗೌಸ್ ಹವಾಲ್ದಾರ್, ಅಭಿಷೇಕ್ ಚಕ್ರವರ್ತಿ, ಸಂಗಮೇಶ ಚೂರಿ, ರಾಜೇಸಾಬ ಶಿವನಗುತ್ತಿ, ಡಿ ಬಿ ನಾಯಕ,ಎಸ್ ಎಲ್ ಇಂಗಳೇಶ್ವರ, ಡಾ ಆನಂದ ಕುಲಕರ್ಣಿ, ಸಿದ್ದರಾಮ ಲಕ್ಕುಂಡಿಮಠ, ಆರ್ ಎಲ್ ಕೊಪ್ಪದ, ಎಂ ಎಚ್ ಆಲನ್ನವರ, ಅಶೋಕ ಆಸಂಗಿ, ಸಂಗಮೇಶ ಕೆಂಭಾವಿ ಕಮಲಾ ಮುರಾಳ, ಸುಖದೇವಿ ಅಲಬಾಳ, ವಿಜಯಲಕ್ಷ್ಮಿ ಕೌಲಗಿ, ಮೌನೇಶ್ವರ ಮೇಟಿ , ನಾಗರಾಜ ಅಮಲಗೊಂಡ, ಡಾ ದತ್ತಾತ್ರೇಯ ಮಳಖೇಡ, ಮುಂತಾದವರು ಉಪಸ್ಥಿತರಿದ್ದರು.