ಡಾ.ಸರ್ವಪಲ್ಲಿ ರಾಧಾಕೃಷ್ಣ ರವರ ಜಯಂತಿ ಆಚರಣೆ

ರಾಯಚೂರು.ಸೆ.೦೫- ನವಯುಗ ಶಿಕ್ಷಣ ಸಂಸ್ಥೆ ರಾಯಚೂರು ಸಂಚಾಲಿತ ನವಯುಗ ಪದವಿ ಮಹಾವಿದ್ಯಾಲಯ ೧೩೪ನೇ ಡಾ.ಸರ್ವಪಲ್ಲಿ ರಾಧಾಕೃಷ್ಣ ರವರ ಹುಟ್ಟು ಹಬ್ಬದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಣೆ ಮಾಡಲಾಯಿತು.
ಡಾ.ಎಸ್.ರಾಧಾಕೃಷ್ಣ ಮತ್ತು ಸರಸ್ವತಿ ರವರ ಭಾವಚಿತ್ರಕ್ಕೆ ನವಯುಗ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಈರಣ್ಣ ಪೂಜಾರಿ ರವರು ಮತ್ತು ಭಗತ್‌ಸಿಂಗ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಸಂಚಾಲಕರಾದ ಸಂಜೀವ್‌ಕುಮಾರ ರವರು ಹೂವಿನ ಹಾರ ಹಾಕಿದರು. ನವಯುಗ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಗೋವಿಂದರಾಜ್ ರವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವವನ್ನು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಗೋವಿಂದರಾಜ್ ರವರು ಶಿಕ್ಷಕ ದಿನಾಚರಣೆಯ ಅಂಗವಾಗಿ ಮಾತನಾಡುತ್ತಾ, ಶಿಕ್ಷಕರ ಮಹತ್ವ ಮತ್ತು ಶಿಕ್ಷಕರುಗಳು ಪಾಲಿಸಬೇಕಾದ ಆದರ್ಶ ಗುಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ತಾನು ಮೇಣದ ಬತ್ತಿಯಂತೆ ಉರಿಯುತ್ತಾನೆ. ತನ್ನ ಕಷ್ಟ ಕಾರ್ಪಣ್ಯಗಳನ್ನು ಮರೆತು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುವ ಜೀವಿಯೇ ಶಿಕ್ಷಕ ಇಂತಹ ಶಿಕ್ಷಕನ ಮಾರ್ಗದರ್ಶನವನ್ನು ಪಡೆದು ವಿದ್ಯಾರ್ಥಿಗಳು ಸಮಾಜದಲ್ಲಿ ಇರುವಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ಸಲಹೆ ನೀಡಿದರು.
ಶಿಕ್ಷಕರ ದಿನಾಚರಣೆಯ ಬಗ್ಗೆ ಬಿ.ಎ. ವಿಭಾಗದ ವಿದ್ಯಾರ್ಥಿನಿಯಾದ ಶಿಲ್ಪಾ ನವಯುಗ ಶಿಕ್ಷಣ ಸಂಸ್ಥೆಯ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ ಉತ್ತಮವಾದ ಒಡನಾಟದಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿ, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರವನ್ನು ನೀಡುತ್ತಾರೆ.
ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ನವಯುಗ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಈರಣ್ಣ ಪೂಜಾರಿ ರವರು, ನವಯುಗ ಬಿ.ಎ. ವಿಭಾಗದ ಮುಖ್ಯಸ್ಥರಾದ ನರಸರೆಡ್ಡಿ ಸರ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಭೀಮಣ್ಣ ಭಂಡಾರಿ ಸರ್, ಹಿರಿಯ ಉಪನ್ಯಾಸಕರಾದ ನಾಗೇಶ ದಿನ್ನಿ ಸರ್, ರವರು ಹಾಗೂ ಉಪನ್ಯಾಸಕರುಗಳಾದ ಬಜಾರಪ್ಪ, ಬಸಮ್ಮ, ಸುಮಂಗಳಾ, ಅನ್ನಪೂರ್ಣ, ತಾಯಪ್ಪ ಮುಂತಾದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಬಿ.ಕಾಂ. ವಿದ್ಯಾರ್ಥಿನಿಯಾದ ಕು.ಸ್ವಾತಿ ನಿರೂಪಿಸಿದರು. ಬಿ.ಎ. ವಿದ್ಯಾರ್ಥಿನಿಯಾದ ರಾಚಮ್ಮ ಸ್ವಾಗತಿಸಿದರು, ಬಿ.ಎಸ್ಸಿ. ವಿದ್ಯಾರ್ಥಿನಿಯಾದ ನರಸಮ್ಮ ಪ್ರಾರ್ಥಿಸಿದರು, ಬಿ.ಎ. ವಿದ್ಯಾರ್ಥಿನಿಯಾದ ಶಾಂಭವಿ ವಂದಿಸಿದರು.