ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜೀವನ ಸಾಧನೆಯಿಂದಾಗೆ ಶಿಕ್ಷಕರಿಗೆ ಘನತೆ ತಂದುಕೊಟ್ಟರುಃ ಪೆÇ್ರ. ಪಿ.ಜಿ. ತಡಸದ

ವಿಜಯಪುರ, ಸೆ.6-ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜೀವನ ಹಾಗೂ ಸಾಧನೆಯಿಂದಾಗೆ ಶಿಕ್ಷಕರಿಗೆ ಘನತೆ ಹಾಗೂ ಗೌರವವನ್ನು ತಂದುಕೊಟ್ಟವರು, ಪಾಶ್ಚಾತ್ಯ ವಿದ್ವಾಂಸರಿಂದ ಅವಗಣನೆಗೆ ಒಳಗಾಗಿದ್ದ ಭಾರತೀಯ ತತ್ವಶಾಸ್ತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲದಿಂದ ತತ್ವಶಾಸ್ತ್ರದಲ್ಲಿ ಸಂಶೋಧನೆ ಕೈಗೊಂಡ ಅವರು ತಮ್ಮನ್ನು ಟೀಕಿಸಿದವರಿಂದಲೇ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾರೆ. ಅವರ ಜೀವನ ಸಾಧನೆ ಎಲ್ಲಾ ಶಿಕ್ಷಕರಿಗೂ ಮಾದರಿಯಾಗಬೇಕು ಎಂದು ಹಿರಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪೆÇ್ರ. ಪಿ.ಜಿ. ತಡಸದ ಹೇಳಿದರು.
ಅವರು ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಮಾತನಾಡಿದ ಅವರು, ತಮ್ಮ ಶೈಕ್ಷಣಿಕ ಹಾಗೂ ವೃತ್ತಿ ಜೀವನದಲ್ಲಿ ಹಲವಾರು ಮಹತ್ತರವಾದ ಹುದ್ದೆಗಳನ್ನು ಅಲಂಕರಿಸಿ, ಪ್ರತಿಯೊಂದರಲ್ಲಿಯೂ ಯಶಸ್ಸನ್ನು ಪಡೆದವರು. ಅವರ ಆಡಳಿತ ಅವಧಿಯಲ್ಲಿಯೂ ಶಾಂತಿಯನ್ನು ಕಾಪಾಡಲು ಪ್ರಾಧಾನ್ಯತೆ ನೀಡಿ, ವಿಶ್ವದ ವಿವಿಧ ದೇಶಗಳಿಂದ ಅನೇಕ ಸನ್ಮಾನ, ಗೌರವಗಳನ್ನು ಪಡೆದವರು. ಡಾ. ರಾಧಾಕೃಷ್ಣನ್ ಅವರ ನಡೆದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ. ಅವರು ಅನುಸರಿಸಿದ ಶಿಕ್ಷಣ, ಸಂಶೋಧನೆಗಳು ಇಂದಿಗೂ ಪ್ರಸ್ತುತ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿವಿಯ ಕುಲಸಚಿವ ಪೆÇ್ರ. ಬಿ. ಎಸ್. ನಾವಿ ಮಾತನಾಡಿ, ರಾಧಾಕೃಷ್ಣನ್ ಅವರ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆಗಳಿಲ್ಲ, ಅವರು ನಿರ್ವಹಿಸಿದ ಪ್ರತಿಯೊಂದು ಜವಾಬ್ದಾರಿಯಲ್ಲಿಯೂ ಅವರು ಯಶಸ್ಸನ್ನು ಪಡೆದಿದ್ದಾರೆ. ಇಂದಿನ ಶಿಕ್ಷಕರು ಅವರ ಹಾದಿಯಲ್ಲಿ ಮುನ್ನಡೆಯುವುದು ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಡಾ. ಹನುಮಂತಯ್ಯ ಪೂಜಾರಿ, ಉಪ ಕುಲಸಚಿವರು, ಆಡಳಿತ ವಿಭಾಗ, ವಿವಿಧ ನಿಕಾಯದ ಡೀನರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು