ಡಾ. ಸರಸ್ವತಿ ಪಾಟೀಲ ಅವರ ಅಭಿನಂದನಾ ಸಮಾರಂಭ ಮತ್ತು ಅನುಭವಸಿರಿ ಗ್ರಂಥ ಲೋಕಾರ್ಪಣೆ

ವಿಜಯಪುರ.ಜ.25:ಡಾ. ಸರಸ್ವತಿ ಪಾಟೀಲ ಅವರ ಅಭಿನಂದನಾ ಸಮಾರಂಭ ಮತ್ತು ಅನುಭವಸಿರಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜ.28ರÀಂದು ಬೆಳಿಗ್ಗೆ 10 ಗಂಟೆಗೆ ವಿಜಯಪುರದ ಹೆಸ್ಕಾಂ ಸಾಂಸ್ಕøತಿಕ ಭವನದ ಡಾ.ಫ.ಗು. ಹಳಕಟ್ಟಿ ವೇದಿಕೆಯಲ್ಲಿ ನಡೆಯಲಿದೆ.

ಹಿರಿಯ ಶಿಕ್ಷಣ ತಜ್ಞೆ ಗುಲ್ಬರ್ಗಾ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಿ ಹಾಗೂ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವಿನ ಬಸವಾಭಿಮಾನಿಗಳ ಸಹಯೋಗದಲ್ಲಿ ನಡೆ ಯಲಿರುವ ಈ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ.

ಅಧ್ಯಕ್ಷತೆಯನ್ನು ಮಹಾದೇವ ಹೊರಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಲಪತಿಗಳು ಕೃಷಿ ವಿಶ್ವವಿದ್ಯಾಲಯದ ಕೊಡಗು ಉಪಕುಲಪತಿ ಡಾ.ಅಶೋಕ ಆಲೂರ ಅವರು ಭಾಗವಹಿಸಲಿದ್ದಾರೆ. ನಂತರ ಎರಡು ಗೋಷ್ಠಿಗಳು ನಡೆಯಲಿದ್ದು, ಡಾ. ಸೋಮಶೇಖರ ವಾಲಿ, ಡಾ. ಎಂ.ಎಂ. ಪÀÀಡಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಮಧ್ಯಾಹ್ನ ಮೂರು ಘಂಟೆಗೆ ಡಾ. ಸರಸ್ವತಿ ಪಾಟೀಲ ಅವರ ಅಭಿನಂದನಾ ಗ್ರಂಥ ಲೋಕಾರ್ಪಣೆಗೊಳ್ಳಲಿದ್ದು, ಗೌರವ ಸನ್ಮಾನ ನಡೆಯಲಿದೆ. ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಲಿಂಗಪ್ಪ ಕಲಬುರ್ಗಿ ವಹಿಸಲಿದ್ದಾರೆ. ಕೃತಿ ಕುರಿತು ಖ್ಯಾತ ಕಥೆಗಾರ ಡಾ.ಚನ್ನಪ್ಪ ಕಟ್ಟಿಯವರು ಮಾತನಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇವರ ಐದು ಕೃತಿಗಳು ಬಿಡುಗಡೆಯಾಗಲಿದ್ದು, ಪ್ರೊ. ಬಿ.ಆರ್. ಪೋಲೀಸ್ ಪಾಟೀಲ ಖ್ಯಾತ ನಾಟಕಕಾರರು ಅಧ್ಯಕ್ಷತೆ ವಹಿಸಲಿದ್ದಾರೆ. ಐದು ಕೃತಿಗಳ ಕುರಿತು ಡಾ. ಸುಧಾ ಕೌಜಗೇರಿಯವರು ಮಾತನಾಡಲಿದ್ದಾರೆ. ನಾಡಿನ ಅನೇಕ ಸಾಹಿತಿಗಳು, ಬಸವಾಭಿಮಾನಿಗಳು ಆಗಮಿ ಸಲಿದ್ದಾರೆ.

ಡಾ. ವೀಣಾ ಹೂಗಾರ, ಡಾ. ಶಾರದಾಮಣಿ ಹುಣಶ್ಯಾಳ, ಅಣ್ಣಾರಾಯ ಬಿರಾದಾರ, ಡಾ. ಎಂ.ಎಸ್. ಮದಭಾವಿ, ವ್ಹಿ.ಸಿ. ನಾಗಠಾಣ, ಜಯಶ್ರೀ ಮತ್ತು ಚನ್ನ ಬಸವಣ್ಣ ಮಹಾಜನಶೆಟ್ಟಿ, ಡಾ. ದಾನಮ್ಮ ಝಳಕಿ, ಶಾರದಮ್ಮ ಪಾಟೀಲ, ಸುಧಾ ಪಾಟೀಲ, ಗೌರಮ್ಮ ನಾಶಿ, ಸುಜಾತಾ ಪಾಟೀಲ ಹಾಗೂ ರಾಯಚೂರು ಧಾರವಾಡ, ಗದಗ, ಬೆಳಗಾವಿ, ಹುಬ್ಬಳ್ಳಿ,ಬಾದಾಮಿ, ಬಾಗಲಕೋಟೆ, ಪುಣೆ, ಬಸವನ ಬಾಗೇವಾಡಿ, ಸಿಂದಗಿ, ವಿಜಯಪುರ ಜಿಲ್ಲೆಯ ಎಲ್ಲ ಬಸವಾಭಿಮಾನಿಗಳು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಸವ ತಿಳುವಳಿಕೆ ಮತ್ತು ಸಂಶೋ ಧನಾ ಕೇಂದ್ರ ಪುಣೆ (ರಿ) ಇವರ ಪ್ರಕಟಣೆಗಳನ್ನು ಡಾ.ಎಂ. ಎಂ.ಕಲಬುರ್ಗಿ ಗ್ರಂಥ ಮಳಿಗೆಯಲ್ಲಿ ಇಡಲಾಗುವದು. ಹೆಚ್ಚಿನ ಸಂಖ್ಯೆ ಯಲ್ಲಿ ಬಸವ ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಹಾಗೂ ಡಾ. ಆನಂದ ಪಾಟೀಲ (ಇಂಗಳೇಶ್ವರ ಹೆಗಡಿಹಾಳ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.